gaati special pooja 
ಜಿಲ್ಲೆ

ಘಾಟಿಯಲ್ಲಿ ವಿಶೇಷ ಪೂಜೆ

ಶಿವರಾಜ.ಎಂ

ತೂಬಗೆರೆ: ಕುಮಾರ ಷಷ್ಠಿ ಹಿನ್ನೆಲೆಯಲ್ಲಿ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿ ಬೆಳಗಿನಿಂದಲೇ ವಿಶೇಷ ಅಲಂಕಾರದೊಂದಿಗೆ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಶ್ವತ್ಥಕಟ್ಟೆಯ ನಾಗರಕಲ್ಲುಗಳು ಕ್ಷೀರಾಭಿಷೇಕ ಮಾಡಿ ಇಷ್ಟಾರ್ಥ ಸಿದ್ಧಿಗೆ ಭಕ್ತರು ಪ್ರಾರ್ಥಿಸಿದರು.
ವಿವಿಧೆಡೆಯಿಂದ ಬೆಳಗಿನಿಂದಲೇ ಆಗಮಿಸಿದ್ದ ಭಕ್ತರು ರಾತ್ರಿವರೆಗೂ ದೇವರ ದರ್ಶನ ಪಡೆದರು.