ಶಿರಸಿ: ಶಿರಸಿ ಮೂಲದ ಸ್ಪಂದನಾ ಹೆಗಡೆ ಅವರು ಆರ್ಗ್ಯಾನಿಕ್ ರಸಾಯನಶಾಸ್ತ್ರದಲ್ಲಿ ಎಂಎಸ್‌ಸಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ 74ನೇ ಘಟಿಕೋತ್ಸವದಲ್ಲಿ 5 ಬಂಗಾರದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಜತೆಗೆ ನಗದು ಬಹುಮಾನವನ್ನು ಪಡೆದು ಸಾಧನೆ ಮಾಡಿದ್ದಾರೆ. ನಾಣಿಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಮಂಜುನಾಥ ಜಿ. ಹೆಗಡೆ ಹಾಗೂ ಶುಭಾ ಹೆಗಡೆ ದಂಪತಿಯ ಪುತ್ರಿಯಾಗಿದ್ದಾರೆ.