ಹಲಗೆ ಸೌಂಡ್​ಗೆ ಸ್ಟೆಪ್​ ಹಾಕಿದ ಎಸ್ಪಿ ಯಶೋದಾ ವಂಟಗೋಡಿ. 
ಜಿಲ್ಲೆ

ಹಲಗೆ ಸದ್ದಿಗೆ ಎಸ್ಪಿ ಯಶೋದಾ ಭರ್ಜರಿ ಡಾನ್ಸ್​ !

ಕೊಪ್ಪಳ: ಸದಾ ಕರ್ತವ್ಯದಲ್ಲಿರುವ ಪೊಲೀಸರು ಇಂದು ವಾರ್ಷಿಕ ಕ್ರೀಡಾಕೂಟ ಕಾರಣ ರಿಲ್ಯಾಕ್ಸ್​ ಮೂಡ್​ನಲ್ಲಿದ್ದರು. ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಎಸ್ಪಿ ಯಶೋದಾ ವಂಟಗೋಡಿ ಮ್ಯೂಸಿಕ್​ಗೆ ತಕ್ಕಂತೆ ಭರ್ಜರಿ ಡಾನ್ಸ್​ ಮಾಡುವ ಮೂಲಕ ಗಮನ ಸೆಳೆದರು.

ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್​ ವಾರ್ಷಿಕ ಕ್ರೀಡಾಕೂಟ ಇದಕ್ಕೆ ಸಾಯಾಯಿತು. ಹಲಗೆ ಬಾರಿಸುತ್ತಲೇ ಬೀಟ್​ಗೆ ತಕ್ಕಂತೆ ತರಹೇವಾರಿ ಸ್ಟೆಪ್​ ಹಾಕಿದರು.

ಮೊದಲು ಸುಮ್ಮನೆ ನಿಂತಿದ್ದ ಸಿಬ್ಬಂದಿ, ಮೇಡಂ ಹೆಜ್ಜೆ ಹಾಕುತ್ತಲೇ ತಾವು ಕೈ ಜೋಡಿಸಿ ಕೆಲ ನಿಮಿಷಗಳ ಕಾಲ ಕುಣಿದು ಹರ್ಷಪಟ್ಟರು. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಕ್ರೀಡಾಕೂಟ ನೆಪದಲ್ಲಿ ಮನರಂಜನೆಪಟ್ಟರು.

ಹಲವಾರು ಕ್ರೀಡೆಗಳಲ್ಲಿ ಭಾಗಿಯಾಗಿದರು. ಕ್ರೀಡಾಕೂಟ ಅಂಗವಾಗಿ ಮಾಧ್ಯಮದ ತಂಡ ಹಾಗೂ ಪೊಲೀಸರ ನಡುವೆ ನಡೆದ ಕ್ರಿಕೆಟ್​ನಲ್ಲಿ ಪೊಲೀಸ್​ ತಂಡ ಚಾಂಪಿಯನ್​ ಆಗಿ ಹೊರ ಹೊಮ್ಮಿತು.