ವಿಜಯವಾಣಿ ಸುದ್ದಿಜಾಲ ಗದಗ
ಇಂದಿನ ಯುವ ಜನತೆಯು ತಂತ್ರಜ್ಞಾನವನ್ನು ತಪ್ಪಾಗಿ ಬಳಸುವದರಿಂದ ಹಿಂದೆ ಸರಿದು ತಮ್ಮ ಬದುಕಿನ ಏಳಿಗೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಾಗಲೂ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು
ನಗರದ ಕೆ.ಎಲ್.ಎ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲದಲ್ಲಿ ಶುಕ್ರವಾರ ಜರುಗಿದ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾಥಿರ್ ಜೀವನ ಎಂದರೆ ಕೇವಲ ಸುವರ್ಣ ಕಾಲವಲ್ಲ, ನಿರಂತರವಾದ ಪರಿಶ್ರಮ, ಆಸಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ಶಿಸ್ತಿನಿಂದ ಕೂಡಿದ್ದರೆ ಮುಂದಿನ ಜೀವನ ಸುವರ್ಣಕಾಲವಾಗಿ ಬದಲಾಗುತ್ತದೆ. ವಿದ್ಯಾಥಿರ್ಗಳು ಮಾದಕ ವಸ್ತುಗಳಿಂದ ದೂರವಿರಬೇಕು. ಇತ್ತೀಚಿನ ದಿನಮಾನಗಳಲ್ಲಿ ಸೈಬರ ಕೆಂ ಹೆಚ್ಚಾಗುತ್ತಿದ್ದು ವಿದ್ಯಾಥಿರ್ಗಳು ಮತ್ತು ಪಾಲಕರು ಜಾಗೃತಿಯಿಂದ ಇರಬೇಕು. ಉತ್ತಮ ಪ್ರಜೆಗಳಾಗಿ ನಾಡಿಗೆ ಮತ್ತು ದೇಶಕ್ಕೆ ಸೇವೆ ಸಲ್ಲಿಸಬೇಕು. ಯಾವುದೇ ಕೆಲಸದಲ್ಲಿ ಹಿರಿದು ಕಿರಿದು ಎಂಬ ತಾರತಮ್ಯ ಸಲ್ಲದು ಎಂದು ತಿಳಿಸಿದರು.
ಅಧ್ಯತೆ ವಹಿಸಿ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯ ಎಸ್.ಪಿ. ಸಂಶಿಮಠ ಮಾತನಾಡಿ, ವಿದ್ಯಾಥಿರ್ಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕು. ಅಭ್ಯಾಸ ಮಾಡಿದ ಶಾಲಾ ಕಾಲೇಜುಗಳಿಗೆ ಹಾಗೂ ತಮ್ಮ ಕುಟುಂಬಕ್ಕೆ ಕೀತಿರ್ ತರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಎಸ್. ನೇಮಗೌಡ ಅವರನ್ನು ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಪಿ. ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ಎಸ್. ಕೌಲಗಿ, ವಿಶ್ವನಾಥ .ಜಿ, ಈಶಣ್ಣ ಮುನವಳ್ಳಿ, ವಿರೇಶ ಕೂಗು, ಎಸ್. ಎಸ್. ಪಟ್ಟಣಶೆಟ್ಟಿ, ಸುಶ್ಮೀತಾ ಪೂಜಾರ, ನಾಗರಾಜ ಬಳಿಗೇರ, ಬಿ. ಆರ್. ಚಿನಗುಂಡಿ ಎಸ್.ಬಿ. ಹಾವೇರಿ ಇದ್ದರು.