ಜಿಲ್ಲೆ

ಮಾನವೀಯತೆ ಮೆರೆದ ಎಸ್‌ಪಿ ಡಾ.‌ಸಂಜೀವ್ ‌ಪಾಟೀಲ.

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಅಪಘಾತಕ್ಕೀಡಾದ ಗಾಯಾಳನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಎಸ್‌ಪಿ‌ಡಾ.‌ಸಂಜೀವ ಪಾಟೀಲ ಮಾನವೀಯತೆ ಮೆರೆದಿದ್ದಾರೆ.
ರಾಯಬಾಗ ತಾಲೂಕಿನ ಬೂದಿಹಾಳ ಕ್ರಾಸ್ ಬಳಿ ನಡೆದಿದ್ದ ಅಪಘಾತ.ಪಾದಚಾರಿಗೆ ಡಿಕ್ಕಿ ಹೊಡೆದಿದ್ದ ಬೈಕ್. ಡಿಕ್ಕಿ ರಭಸಕ್ಕೆ‌ ಪಾದಚಾರಿ ಗಂಭೀರ ಗಾಯಗೊಂಡಿದ್ದನು. ಈ ವೇಳೆ
ರಾಯಬಾಗ ಠಾಣೆಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಎಸ್‌ಪಿ ಡಾ.ಸಂಜೀವ್.
ಅಪಘಾತ ಕಂಡು ಕೂಡಲೇ ಎಸ್‌ಪಿ ಗಾಯಾಳನ್ನು ಆರೈಕೆ ಮಾಡಿ, ರಾಯಬಾಗ ತಾಲೂಕಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎಸ್ ಪಿ ಅವರ ಕಾರ್ಯವೈಖಯ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.