ಬೆಳಗಾವಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಹಮ್ಮಿಕೊಂಡಿರುವ ಫೋನ್ ಇನ್‌ನ 12ನೇ ಕಾರ್ಯಕ್ರಮದಲ್ಲಿಯೂ ಸಾರ್ವಜನಿಕರಿಂದ ಉತ್ತಪ ಸ್ಪಂದನೆ ವ್ಯಕ್ತವಾಯಿತು. ದೂರುಗಳ ಮಹಪೂರವೇ ಹರಿದುಬಂದಿತು. ಠಾಣೆಗಳಿಗೆ ಅಲೆದರೂ ದೂರು ದಾಖಲಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ನಿರಾಕರಿಸುವುದು ಹಾಗೂ ನಾಪತ್ತೆಯಾದವರ ಪತ್ತೆಹಚ್ಚದಿರುವುದು, ಕಳ್ಳತನ, ದರೋಡೆ ಹಾಗೂ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಮನವಿ ಮಾಡಿಕೊಂಡರು.
ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರು ನೀಡಿದರು. ಸುಮಾರು 50 ಕರೆಗಳನ್ನು ಸ್ವಿಕರಿಸಿದ ಎಸ್ಪಿ ಅವರು, ಎಲ್ಲರಿಗೂ ಸ್ಪಂಧಿಸಿದ ತ್ವರಿತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.
ನಿಪ್ಪಾಣಿ, ಯಕ್ಸಂಬಾ ಹಾಗೂ ಭೋರಗಾಂವ ಗ್ರಾಮದಲ್ಲಿ ಪ್ರಕರಣ ದಾಖಲಿಸಿಕೊಳ್ಳದಿರುವುದು ಹಾಗೂ ಆರೋಪಿಗಳ ಬಂಧಿಸುವಲ್ಲಿ ವಿಳಂಭವಾಗುತ್ತಿರುವ ಬಗ್ಗೆ, ಕಲ್ಲೋಳ, ಹಲ್ಯಾಳ, ಮಮದಾಪುರ, ಹಿರೇಬುದ್ನೂರ, ತಗ್ಗಿಹಾಳ, ಉಳ್ಳಾಗಡ್ಡಿ, ಹೊನ್ನರಗಿ, ಹಾಗೂ ಮಳಗಲಿ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ವ್ಯಾಪಕವಾಗಿ ನಡೆಯುತ್ತಿರುವುದನ್ನು ತಡೆಗಟ್ಟುವಂತೆ ಸಾರ್ವಜನಿಕರು ದೂರು ನೀಡಿದರು. ಪ್ರತಿಕ್ರಿಯಿಸಿದ ಎಸ್ಪಿ ಪಾಟೀಲ ಅವರು, ಅಕ್ರಮವಾಗಿ ಮಾರಾಟ ಮಾಡುತ್ತಿರುವರ ವಿರುದ್ಧ ಕ್ರಮ ಜರುಗಿಸಿ, ಅಕ್ರಮ ಸಾರಾಯಿ ಮಾರಾಟ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರಲ್ಲದೇ, ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಎಲ್ಲ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದರು.