ಜಿಲ್ಲೆ

ಪುತ್ತಿಲ ಪರಿವಾರದಿಂದ ಸೌಮ್ಯ ಸ್ಮೃತಿ ಕಟ್ಟೆ ನಮನ

Mangaluru - Nishantha Narayana

ಪುತ್ತೂರು: ಕಬಕದಿಂದ ವಡ್ಯದ ಮನೆ ಹೋಗುತ್ತಿದ್ದ ಸಂದರ್ಭ ಸೌಮ್ಯ ಭಟ್ ಭೀಕರ ಕೊಲೆಯಾಗಿ ಇಂದಿಗೆ 26 ವರ್ಷ ಆದ ದಿನದ ಪ್ರಯುಕ್ತ, ಪುತ್ತಿಲ ಪರಿವಾರದ ವತಿಯಿಂದ ಕಬಕ ಸಮೀಪ ಕೊಲೆಯಾದ ಸ್ಥಳದಲ್ಲಿರುವ 'ಸೌಮ್ಯ ಸ್ಮೃತಿ' ಕಟ್ಟೆಗೆ ಭೇಟಿ ನೀಡಿ ಕಟ್ಟೆ ಸ್ವಚ್ಚಗೊಳಿಸಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಡಾ.ಶಶಿಧರ್ ಕಜೆ, ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಜೊತೆ ಕಾರ್ಯದರ್ಶಿ ಉಮೇಶ್ ಗೌಡ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಪ್ರಸಾದ್ ಶೆಟ್ಟಿ, ವಸಂತ ಕಬಕ, ಗಣೇಶ್ ಕಬಕ, ಸಚಿನ್ , ವಿದ್ಯಾಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.