ಹಿರೀಸಾವೆ ಹೋಬಳಿ ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಪುಟ್ಟರಾಜು, ಎಂ.ಆರ್.ವಾಸು, ಶ್ರೀಕಂಠಪ್ಪ, ಎಚ್.ಕೆ.ಸುಧಾಕರ್, ರೇಣುಕಾ, ಸಿ.ಎನ್.ಅಶೋಕ್ ಇದ್ದರು. 
ಜಿಲ್ಲೆ

ಮಕ್ಕಳಲ್ಲಿ ಸಾಹಿತ್ಯ ಬೀಜ ಬಿತ್ತುವ ಕಾರ್ಯ ಯಶಸ್ವಿ

ಹಿರೀಸಾವೆ: ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಬೀಜವನ್ನು ಬಿತ್ತುವ ಕಾರ್ಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಯಶಸ್ವಿ ಕಂಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಘಟಕದ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶದ ರಾಜಧಾನಿ ದೆಹಲಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ತಲೆ ಎತ್ತಿ ನಿಂತಿದೆ. ನ.15 ರಂದು ರಾಷ್ಟ್ರ ಮಟ್ಟದ ಸಮ್ಮೇಳನ ಜರುಗಲಿದ್ದು ನವದೆಹಲಿಯಲ್ಲಿ ಕನ್ನಡ ಕಂಪು ಹರಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಸಾಹಿತ್ಯ ಭಾವನೆಯನ್ನು ಹೊರತರುವ ಸಣ್ಣ ಪ್ರಯತ್ನದಲ್ಲಿ ದೊಡ್ಡ ಯಶಸ್ಸು ಕಂಡಿದ್ದೇವೆ. ನ.25 ರಂದು ಹಿರೀಸಾವೆ ಹೋಬಳಿ ಘಟಕದ ವತಿಯಿಂದ ಪಿ.ಹೊಸಹಳ್ಳಿಯಲ್ಲಿ ದ್ವಿತೀಯ ಸಮ್ಮೇಳನ ಆಚರಿಸಲಿದ್ದು ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಎಚ್.ಆರ್.ಪಲ್ಲವಿ ಅವರನ್ನು ಅಭಿನಂಧಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕವನ ವಾಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ದಿಡಗ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಕಂಠಪ್ಪ, ಗ್ರಾಪಂ ಸದಸ್ಯರಾದ ಎಚ್.ಕೆ.ಸುಧಾಕರ್, ರೇಣುಕಾ, ಕೆ.ಎನ್.ಹರಿಪ್ರಸಾದ್, ಆನಂದ್, ನಾಗನಹಳ್ಳಿ ರವಿ, ಬಾಲಕೃಷ್ಣ, ಬಿಳಿಕೆರೆ ರಂಗೇಗೌಡ, ಆಚರಣಾ ಸಮಿತಿ ಅಧ್ಯಕ್ಷ ಎಚ್.ಕೆ.ಸುಧಾಕರ್, ಪಿಡಿಒ ಕೆ.ಎಸ್.ಪ್ರಕಾಶ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಜಗದೀಶ್, ಕಾರ್ಯಾಧ್ಯಕ್ಷ ಮಹಾದೇವ್, ಹೋಬಳಿ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಶಾಲಾ ಮುಖ್ಯಶಿಕ್ಷಕಿ ಧನಲಕ್ಷ್ಮೀ, ಸಹಶಿಕ್ಷಕ ಪುರುಷೋತ್ತಮ್, ಅತಿಥಿ ಶಿಕ್ಷಕಿ ಅಮೃತಾ, ಸಿಬ್ಬಂದಿ ಪಂಕಜಾ ಹಾಗೂ ಇತರರು ಇದ್ದರು.