ನಾಲತವಾಡ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪೃಥ್ವಿರಾಜ ನಾಡಗೌಡ, ವೈ.ಬಿ.ಕ್ಷತ್ರಿ, ಶಂಕರರಾವ ದೇಶಮುಖ, ಬಸವರಾಜ ಗಡ್ಡಿ ಇತರರಿದ್ದರು. 
ಜಿಲ್ಲೆ

ಬಿತ್ತನೆ ಬೀಜ ವಿತರಣೆ ಸಮರ್ಪಕವಾಗಿ ಮಾಡಿ

ನಾಲತವಾಡ: ಹಿಂಗಾರು ಹಂಗಾಮಿನ ಸನ್ 2023-24ನೇ ಸಾಲಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಮಾತನಾಡಿ, ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಸಮರ್ಪಕವಾಗಿ ಬೀಜಗಳನ್ನು ವಿತರಣೆ ಮಾಡಬೇಕು. ಬೀಜ ವಿತರಣೆಯಲ್ಲಿ ಯಾರಿಗೂ ತಾರತಮ್ಯ ಆಗಬಾರದು ಎಂದರು.

ಕೃಷಿ ಅಧಿಕಾರಿ ವೈ.ಬಿ.ಕ್ಷತ್ರಿ ಮಾತನಾಡಿ, ಹಿಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯ ಪ್ರಾರಂಭಿಸಲಾಗಿದೆ. ರೈತರು ಕೃಷಿ ಕಾರ್ಯಾಲಯಕ್ಕೆ ಬಂದು ಬೀಜವನ್ನು ಖರೀದಿ ಮಾಡಬೇಕು ಎಂದರು. ನವದೆಹಲಿ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರರಾವ ದೇಶಮುಖ, ಬಸವರಾಜ ಗಡ್ಡಿ ಇತರರಿದ್ದರು.