ಮುದಗಲ್ ಸಮೀಪದ ಬನ್ನಿಗೋಳ ಹೊರವಲಯದಲ್ಲಿರುವ ಹಳ್ಳ ತುಂಬಿ ಹರಿಯುತ್ತಿರುವುದು. 
ಜಿಲ್ಲೆ

ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿದ ರೈತರು

ರುದ್ರಪ್ಪ ವಾಲಿ

ಮುದಗಲ್: ಪಟ್ಟಣ ಸೇರಿದಂತೆ ಸುತ್ತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದೆ.

ಬನ್ನಿಗೋಳ-ಅಂಕಲಿ ಮಠ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹರಿಯುವ ಹಳ್ಳ ತುಂಬಿ ಹರಿಯುತ್ತಿದೆ. ಕನಸಾವಿ, ಆದಾಪೂರ, ನಾಗಲಾಪುರ, ನಾಗರಹಾಳ, ಆಮದಿಹಾಳ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾಗಿದೆ. ಬಿತ್ತನೆಗೆ ರೈತ ಸಮೂಹ ಸಿದ್ಧತೆಯಲ್ಲಿದ್ದು, ಈ ಬಾರಿ ಮುಂಗಾರು ಪ್ರವೇಶ ಅವಧಿಗೆ ಮುನ್ನವೇ ಅಪ್ಪಳಿಸಿದ್ದು ರೈತರಿಗೆ ವರದಾನವಾಗಲಿದೆ ಎಂದು ರೈತ ಸಮೂಹ ಹರ್ಷ ವ್ಯಕ್ತಪಡಿಸಿದೆ.