ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ಕಳೆದ ಮೇ ತಿಂಗಳಲ್ಲಿ ಪ್ರಯಾಣಿಕರ ಸೇವೆ, ಡಿಜಿಟಲ್ ನವೀನತೆ ಮತ್ತು ಆದಾಯದಲ್ಲಿ ಪ್ರಗತಿ ದಾಖಲಿಸಿದ್ದು, ಗಮನಾರ್ಹ ಸಾಧನೆಗೈದಿದೆ.
ಹುಬ್ಬಳ್ಳಿ ವಿಭಾಗದಲ್ಲಿ ಹೊಸ ಮಾರ್ಗದರ್ಶಕ್ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆ ಪರಿಚಯಿಸಲಾಗಿದೆ. ಹುಬ್ಬಳ್ಳಿಯಲ್ಲಿ 2 ಮತ್ತು ಮೈಸೂರು ನಿಲ್ದಾಣಗಳಲ್ಲಿ 4 ಸೇರಿ ಒಟ್ಟು ಆರು ಹೊಸ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ನಲ್ಲಿ (ಎಸ್ಎಂವಿಬಿ) ಪ್ರವೇಶ ನಿಯಂತ್ರಿತ ರ್ಪಾಂಗ್ ಸೇವೆಗೆ 69.40 ಲಕ್ಷ ರೂ. ಮತ್ತು ಹುಬ್ಬಳ್ಳಿಯಲ್ಲಿ 56 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮೈಸೂರಿನಲ್ಲಿ ಮೊಬೈಲ್ ಪರಿಕರಗಳ ಕಿಯೋಸ್ಕ್ಗೆ 30.90 ಲಕ್ಷ ಮತ್ತು ಕೆಎಸ್ಆರ್ ಬೆಂಗಳೂರು ನಗರದಲ್ಲಿ ಹವಾನಿಯಂತ್ರಿತ ಮಲ್ಟಿಕ್ಯೂಸಿನ್ ಕೋಚ್ ರೆಸೊ್ಟೕರೆಂಟ್ಗೆ 215.46 ಲಕ್ಷ ರೂ. ವಾಣಿಜ್ಯ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ.
ಆದಾಯ : ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೈಋತ್ಯ ರೈಲ್ವೆಯ ಒಟ್ಟು ಆದಾಯವು 642 ಕೋಟಿ ರೂ.ಗಳಿಂದ 780 ಕೋಟಿ ರೂ.ಗೆ ತಲುಪಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಆದಾಯದಲ್ಲಿ ಶೇ. 36.91 ರಷ್ಟು ಹೆಚ್ಚಳವಾಗಿದ್ದು, 459.43 ಕೋಟಿ ರೂ. ತಲುಪಿದೆ. ಟಿಕೆಟ್ ಪರಿಶೀಲನೆ ಮೂಲಕ 6.57 ಕೋಟಿ ಆದಾಯ ಗಳಿಸಿದ್ದು, ಇದು ಶೇ. 33ರಷ್ಟು ಏರಿಕೆ ಕಂಡಿದೆ. ಪಾರ್ಸೆಲ್ ಸೇವೆಗಳ ಮೂಲಕ ಆದಾಯವು 14.84 ಕೋಟಿ ರೂ.ಗೆ ತಲುಪಿದ್ದು, ಶೇ. 11.66ರಷ್ಟು ಹೆಚ್ಚಳವಾಗಿದೆ.
ಆನ್ಲೈನ್ ಪಾವತಿ ವ್ಯವಸ್ಥೆಯು 102.97 ಕೋಟಿ ಮೌಲ್ಯದ ಸರಕು ವಹಿವಾಟುಗಳನ್ನು ಸುಗಮಗೊಳಿಸಿದ್ದು, ಶೇ. 100 ರಷ್ಟು ಡಿಜಿಟಲ್ ಪಾವತಿಗಳನ್ನು ಸಾಧಿಸಿದೆ. ಜತೆಗೆ ಮೊಬೈಲ್ ಘಟಕ ನಿರ್ವಹಣೆೆಯ ಉದ್ದೇಶಕ್ಕಾಗಿ ಐಆರ್ಸಿಟಿಸಿ 18.63 ಕೋಟಿಗಳ ನೆರವನ್ನು ಒದಗಿಸಿದೆ.
ಪ್ರಯಾಣಿಕರ ಸಂಖ್ಯೆ ಶೇ. 3.58ರಷ್ಟು ಹೆಚ್ಚಾಗಿ 15.33 ಮಿಲಿಯನ್ಗಳಿಗೆ ತಲುಪಿದೆ. ಇದರಿಂದ 263 ವಿಶೇಷ ರೈಲುಗಳ ಸೇವೆ ನೀಡಲಾಯಿತು. 2024ರ ಮೇ ತಿಂಗಳಿಗೆ ಹೋಲಿಸಿದರೆ ‘ರೈಲ್ ಮದದ್‘ ದೂರುಗಳು ಶೇ. 30.29ರಷ್ಟು ಕಡಿಮೆಯಾಗಿವೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.