ಜಿಲ್ಲೆ

ಕೆಎಸ್​ಆರ್ ನಿಲ್ದಾಣದಿಂದ ಹೊರಡುವ ಡಬಲ್​ ಡೆಕ್ಕರ್​ ಎಕ್ಸ್​ಪ್ರೆಸ್​ ರೈಲಿನ ಸಮಯ ಪರಿಷ್ಕರಣೆ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್​) ರೈಲ್ವೆ ನಿಲ್ದಾಣ ಮತ್ತು ಪುರಚ್ಚಿ ತಲೈವರ್​ ಡಾ.ಎಂ.ಜಿ.ಆರ್​ ಚೆನ್ನೈ ಸೆಂಟ್ರಲ್​ ರೈಲ್ವೆ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಡಬಲ್​ ಡೆಕ್ಕರ್​ ಎಕ್ಸ್​ಪ್ರೆಸ್​ (ಸಂಖ್ಯೆ 22626) ರೈಲಿನ ವೇಳಾಪಟ್ಟಿ ಪರಿಷ್ಕರಿಸಲು ದಣ ರೈಲ್ವೆಯು ಸೂಚಿಸಿದೆ.

ನೂತನ ವೇಳಾಪಟ್ಟಿ ಮೇ.1 ರಿಂದ ಅನ್ವಯವಾಗಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 1.30ಕ್ಕೆ ಕೆಎಸ್​ಆರ್​ ನಿಲ್ದಾಣದಿಂದ ಹೊರಟು, ಚೆನ್ನೈ ಸೆಂಟ್ರಲ್​ ನಿಲ್ದಾಣವನ್ನು ಸಂಜೆ 7.45ಕ್ಕೆ ತಲುಪಲಿದೆ.

ಪರಿಷ್ಕೃತ ವೇಳಾಪಟ್ಟಿ ವಿವರ:

ಬೆಂಗಳೂರಿನಿಂದ ಮಧ್ಯಾಹ್ನ 1:30ಕ್ಕೆ ರೈಲು ಹೊರಡಲಿದೆ. ಮಧ್ಯದಲ್ಲಿ ಈ ರೈಲು ಬೆಂಗಳೂರಿನ ಕಂಟೋನ್ಮೆಂಟ್ (1:40/1:42PM), ಕೃಷ್ಣರಾಜಪುರಂ (1:52/1:54PM), ಬಂಗಾರಪೇಟೆ (2:34/2:35PM), ಕುಪ್ಪಂ (3:2/3:3PM), ಜೋಲಾರಪೆಟ್ಟೈ (4:15/4:20PM), ವನ್ನಿಯಂಬಾಡಿ (4:34/4:36PM), ಅಂಬೂರು (4:48/4:50 PM), ಕಟಪಾಡಿ (5:43/5:45PM), ಅರಕ್ಕೋಣಂ (6:28/6:30 PM), ಪೆರಂಬೂರ್ (7:13/7:15PM) ಈ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್‌ ನಿಲ್ದಾಣವನ್ನು ಸಂಜೆ 7:45ಕ್ಕೆ ತಲುಪಲಿದೆ.