ಜಿಲ್ಲೆ

ನೈಋತ್ಯ ರೈಲ್ವೆಗೆ ಏಪ್ರಿಲ್​ನಲ್ಲಿ 22.89 ಕೋಟಿ ರೂ. ಆದಾಯ

ಹುಬ್ಬಳ್ಳಿ : ಬೇಸಿಗೆ ರಜೆ ಋತುವಿನಲ್ಲಿ ನೈಋತ್ಯ ರೈಲ್ವೆ ದೇಶಾದ್ಯಂತ ಪ್ರಯಾಣಿಕರಿಗೆ ಸುಲಭ ಮತ್ತು ಆರಾಮದ ಪ್ರಯಾಣವನ್ನು ಕಲ್ಪಿಸುವ ಸಲುವಾಗಿ, ಪ್ರಮುಖ ನಗರಗಳು ಮತ್ತು ಪ್ರವಾಸಿ ಆಕರ್ಷಕ ಸ್ಥಳಗಳನ್ನು ಸಂರ್ಪಸುವ ಜನಪ್ರಿಯ ಮಾರ್ಗಗಳಲ್ಲಿ 53 ರೈಲುಗಳ ಒಟ್ಟು 338 ಟ್ರಿಪ್​ಗಳನ್ನು ಓಡಿಸಿದೆ.

ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ 2024ರ ಏಪ್ರಿಲ್​ನಲ್ಲಿ ಅಸಾಧಾರಣ ಯಶಸ್ಸು ಸಾಧಿಸಿದೆ. ಆದಾಯದ ಅಂದಾಜುಗಳನ್ನು ಮೀರಿದೆ ಮತ್ತು ಹೆಚ್ಚಿನ ಪ್ರಯಾಣಿಕರ ಆಕ್ಯುಪೆನ್ಸಿ(ಭರ್ತಿ) ದರಗಳನ್ನು ತಲುಪಿದೆ.

ನೈಋತ್ಯ ರೈಲ್ವೆಯು ಕಳೆದ ವರ್ಷದ ಏಪ್ರಿಲ್​ನಲ್ಲಿ 28 ರೈಲುಗಳನ್ನು ಓಡಿಸಿದ್ದರೆ, ಈ ವರ್ಷದ ಏಪ್ರಿಲ್​ನಲ್ಲಿ 53 ರೈಲುಗಳನ್ನು ಓಡಿಸಿದೆ. ಒಟ್ಟು ಶೇ. 89.28 ರಷ್ಟು ರೈಲುಗಳನ್ನು ಹೆಚ್ಚಿಸಲಾಗಿದೆ.

ಈ ಬೇಸಿಗೆ ವಿಶೇಷ ರೈಲುಗಳಿಂದ 22.89 ಕೋಟಿ ರೂ.ಗೆ ಆದಾಯ ತಲುಪಿದೆ. ಕಳೆದ ವರ್ಷ 9.76 ಕೋಟಿ ರೂ. ಆದಾಯ ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯವು ಶೇ. 134 ರಷ್ಟು ಹೆಚ್ಚಾಗಿದೆ.

ಈ ಬೇಸಿಗೆಯಲ್ಲಿ ಒಟ್ಟು 2.71 ಲಕ್ಷ ಪ್ರಯಾಣಿಕರು ವಿವಿಧ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾದ 1.70 ಲಕ್ಷ ಪ್ರಯಾಣಿಕರಿಗೆ ಹೋಲಿಸಿದರೆ, ಶೇ. 59.92 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಕೆಎಸ್​ಆರ್ ಬೆಂಗಳೂರá- ದಾನಾಪುರ್ ಮಾರ್ಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಬೇಸಿಗೆ ವಿಶೇಷ ರೈಲು ಮಾರ್ಗಗಳಲ್ಲಿ ಒಂದಾಗಿದ್ದು , ಆಕರ್ಷಕ ಆದಾಯ ಮತ್ತು ಬುಕಿಂಗ್ ದರಗಳೊಂದಿಗೆ 88.86 ಲಕ್ಷ ರೂ.ಗಳಿಸಿದೆ.

ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ತೆಲಂಗಾಣ, ಅಸ್ಸಾಂ ಹೀಗೆ ಪ್ರಮುಖ ರಾಜ್ಯಗಳಿಗೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಾಗಿದೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ಶ್ರಮಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ವಿಶೇಷ ರೈಲುಗಳು ರಜಾದಿನಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲಿ ತಮ್ಮ ಊರುಗಳಿಗೆ ಮರಳುವ ವಲಸೆ ಕಾರ್ವಿುಕರಿಗೂ ಉಪಯುಕ್ತವಾಗಿವೆ ಎಂದು ಹೇಳಿದ್ದಾರೆ.