ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ., ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 22ನೇ ವಾರ್ಷಿಕ ಸಭೆ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಎಸ್‌ಕೆಪಿಎ ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೆರೋ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ ಉಪಸ್ಥಿತರಿದ್ದರು. 
ಜಿಲ್ಲೆ

ಸಂಘಟನೆ ಬಲವರ್ಧನೆಗೆ ಸಹಕಾರ ಅಗತ್ಯ : ಪದ್ಮಪ್ರಸಾದ್ ಜೈನ್

ಬೆಳ್ತಂಗಡಿ: ಸಂಘಟನೆಯಲ್ಲಿ ನಿಸ್ವಾರ್ಥ ಸೇವೆ ನೀಡುವ ಮೂಲಕ ಸಂಘಟನೆ ಬಲವರ್ಧನೆ ಆಗಲು ಸದಸ್ಯರ ಸಹಕಾರ ಅಗತ್ಯ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರ ಮಾರ್ಗದರ್ಶನದೊಂದಿಗೆ ಮುನ್ನಡೆಯುವುದು ಉತ್ತಮ ಎಂದು ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಹೇಳಿದರು.

ಗುರುವಾಯನಕೆರೆ ಛಾಯಾ ಭವನದಲ್ಲಿ ಮಂಗಳವಾರ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ., ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 22ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಕೆಪಿಎ ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೆರೋ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರಧ್ವಜ್, ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಜಾರ್ಚ್ ಗೊನ್ಸಾಲ್ವಿಸ್ ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಕೆ.ವಸಂತ ಶರ್ಮ, ವಲಯದ ಗೌರವಾಧ್ಯಕ್ಷ ಜಗದೀಶ್ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು.

ಬೆಳ್ತಂಗಡಿ ವಲಯ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ.ಸುವರ್ಣ ಪ್ರಾಸ್ತಾವಿಕವಾಗಿ ಮಾತಾನಾಡಿದರು, ವಲಯದ ಪ್ರಧಾನ ಕಾರ್ಯದರ್ಶಿ ವಿಜಯ ಎಚ್.ಪ್ರಸಾದ್ ವರದಿ ಮಂಡಿಸಿದರು. ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಲೆಕ್ಕಪತ್ರ ಮಂಡಿಸಿದರು. ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆಗೈದರು ಜಗದೀಶ್ ಜೈನ್ ಸ್ವಾಗತಿಸಿ, ಉಮೇಶ್ ಮದ್ದಡ್ಕ ನಿರೂಪಿಸಿ, ಕೆ.ವಸಂತ್ ಶರ್ಮ ವಂದಿಸಿದರು.

ಎಲ್ಲ ಸದಸ್ಯರಿಗೆ ವಲಯದ ಗೌರವಾಧ್ಯಕ್ಷ ಜಗದೀಶ್ ಜೈನ್ ಪ್ರಯೋಜಕತ್ವದಲ್ಲಿ ಹೊಸ ಯೋಜನೆಯೊಂದಿಗೆ ಗಿಫ್ಟ್ ನೀಡಲಾಯಿತು.