ಜಿಲ್ಲೆ

ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ - ಮಹೇಶ ಕುಮಠಳ್ಳಿ

Belagavi

ಅಥಣಿ: ಗ್ರಾಮೀಣ ವ್ಯಾಪ್ತಿಯ ಶಿವಯೋಗಿ ನಗರಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲೀಕರಣ ಇಲಾಖೆಯಿಂದ ಮಂಜೂರಾದ 4 ಲಕ್ಷ ರೂ. ವೆಚ್ಚದ 1.2 ಕಿ.ಮೀ. ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲಾಖೆ ಯಿಂದ ಅನುದಾನ ಮಂಜೂರಾಗಿದೆ. ಗುಣ ಮಟ್ಟದ ಕಾಮಗಾರಿ ಕೈಗೊಂಡು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಕುಡಿ ಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವೀರಣ್ಣ ವಾಲಿ, ಸಹಾಯಕ ಅಭಿಯಂತ ಎಸ್.ಎ.ಸಾವಗಾವ್, ಮುಖಂಡರಾದ ನಿಂಗಪ್ಪ ನಂದೇಶ್ವರ, ಶಿವಾನಂದ ದೀವಾನಮಳ, ಕೇದಾರಿ ಹಳ್ಳದಮಳ, ಶಿವಪಾದ ರೋಕಡಿ, ಸದಾಶಿವ ಕೊಂಪಿ, ಶಿವು ಬಡಿಗೇರ, ಆಕಾಶ ಹೊನ್ನಳ್ಳಿ, ಮುತ್ತು ಐಗಳಿ, ಬಸವರಾಜ ಹಳ್ಳದಮಳ ಇತರರು ಉಪಸ್ಥಿತರಿದ್ದರು.