ಮಡಿಕೇರಿ: ಮಹಿಳಾ ಸಬಲೀಕರಣ, ಯುವ ಜನಾಂಗದ ಪ್ರತಿಭೆ ಅನಾವರಣ ಹಾಗೂ ಮಹಿಳೆಯನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಗೋಣಿಕೊಪ್ಪಲುವಿನಲ್ಲಿ ಆರ್.ಕೆ.ಯೂನಿವರ್ಸ್ ಕೂರ್ಗ್ ಪ್ರ್ರಾಯೋಜನೆಯಲ್ಲಿ ಮುಕ್ತ ಸೌಂದರ್ಯ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿರುವುದಾಗಿ ಸಂಯೋಜಕ ಮಿಸ್ಸೆಸ್ ಇಂಡಿಯಾ ಸ್ಪರ್ಧಾ ವಿಜೇತ ಕೊಣಿಯಂಡ ಕಾವ್ಯ ಸಂಜು ತಿಳಿಸಿದ್ದಾರೆ.
ಗೋಣಿಕೊಪ್ಪಲು ಪ್ರಕಾಶ್ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಕೂರ್ಗ್ ಸ್ಪರ್ಧಾ ವಿಭಾಗದಲ್ಲಿ ನಾಮೇರ ಶರ್ಲಿ ಬೋಪಣ್ಣ, ರಿಶಾ ನಾಣಯ್ಯ ಮಿಸ್ ಕೂರ್ಗ್ ಹಾಗೂ ಮಿಸ್ಟರ್ ಕೂರ್ಗ್ ವಿಭಾಗದಲ್ಲಿ ನೆಲ್ಲೀರ ಕೃಪಾ ಸುಬ್ಬಯ್ಯ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲುವಿನಲ್ಲಿ ಜರುಗಿದ ಮುಕ್ತ ಸೌಂದರ್ಯ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು ೩೫ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕೇವಲ ಸೌಂದರ್ಯ ಸ್ಪರ್ಧೆಯಲ್ಲದೇ ಅತ್ಯುತ್ತಮ ಕೇಶ ವಿನ್ಯಾಸ, ನಗು, ನೇತ್ರ, ವ್ಯಕ್ತಿತ್ವ, ವಸ್ತ್ರವಿನ್ಯಾಸ, ಫ್ಯಾಷನ್ ಐಕಾನ್, ಮಿಸ್ಟರ್ ಹ್ಯಾಂಡ್‌ಸಮ್, ಅತ್ಯುತ್ತಮ ಆಟಿಟ್ಯೂಡ್ ಪ್ರಶಸ್ತಿಯನ್ನು ನೀಡಲಾಗಿದೆ. ವಿಜೇತರಿಗೆ ಸ್ಯಾಸ್ ಕ್ರೌನ್, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಾಯಭಾರಿ ನಂದಿನಿ ನಾಗರಾಜ್, ಗಂಗೂಲಿ ಮಂಗಳೂರು ಭಾಗವಹಿಸಿದ್ದರು.
ವಿಜೇತರ ವಿವರ: ಮಿಸೆಸ್ ಕೂರ್ಗ್ ವಿಭಾಗದಲ್ಲಿ ನಾಮೇರ ಶರ್ಲಿಬೋಪಣ್ಣ ಹಾತೂರು(ಪ್ರ), ಕೃಷ್ಣಕುಮಾರಿ, ಬೆಂಗಳೂರು(ದ್ವಿ), ತಂಬಂಡ ತೇಜಾ ಕುಶಾಲನಗರ(ತೃ), ಮಿಸೆಸ್ ಕೂರ್ಗ್ ಕರ್ವಿ ಆದೇಂಗಡ ಗ್ರೀಷ್ಮ ಬಾಳೆಲೆ(ಪ್ರ), ನಯನ, ವಿರಾಜಪೇಟೆ(ದ್ವಿ), ಮಿಸ್ ಕೂರ್ಗ್ ವಿಭಾಗದಲ್ಲಿ ರಿಶಾನಾಣಯ್ಯ, ಅತ್ತೂರು(ಪ್ರ), ಕೊಣಿಯಂಡ ದೀಶ್ಮಾ ಜೋಯಪ್ಪ(ದ್ವಿ), ಆದೇಂಗಡ ವರ್ಷ ಮತ್ತೂರು(ತೃ)., ಮಿಸ್ಟರ್ ಕೂರ್ಗ್ ವಿಭಾಗದಲ್ಲಿ ನೆಲ್ಲಿರ ಕೃಪಾ ಸುಬ್ಬಯ್ಯ(ಪ್ರ), ಮನೀಷ್, ಗೋಣಿಕೊಪ್ಪ(ದ್ವಿ), ಶಕೀಲ್ ಅಹಮ್ಮದ್ ಗೋಣಿಕೊಪ್ಪ(ತೃ), ಮಿಸ್ಟರ್ ಸ್ಕಾಟ್‌ಲ್ಯಾಂಡ್ ಕಿಂಗ್ ಕೂರ್ಗ್ ೨೦೨೩ ಮಿಸ್ಟರ್ ಕಮಲ್ ಆರ್.ಗೋಣಿಕೊಪ್ಪಲು ಪಡೆದುಕೊಂಡರು.
ತೀರ್ಪುಗಾರರಾಗಿ ಬೆಂಗಳೂರು ಮಾಡೆಲ್ ರಮೀಸ್, ಚಿತ್ರನಟಿ ರಿನ್ನಿ ಭರತ್ ಮುಂಡಚಾಡೀರ, ವಿರಾಜಪೇಟೆ ಕಾರ್ಯ ನಿರ್ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಸುಮಿ ಸುಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು. ಕೊಣಿಯಂಡ ಕಾವ್ಯ ಸಂಜು, ಸುಷ್ಮಾ ಮತ್ತು ಕಮಲಾ ತಂಡ ನೇತೃತ್ವ ವಹಿಸಿದ್ದರು. ಮುಂದಿನ ಹಂತದ ರಾಜ್ಯ ಮಟ್ಟದ ಸ್ಪರ್ಧೆ ನಂದಿನಿ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಯೋಜಕರು ತಿಳಿಸಿದ್ದಾರೆ.