ಜಿಲ್ಲೆ

ಆದರ್ಶ ಶಾಲೆಗೆ ಧ್ವನಿವರ್ಧಕ ಕೊಡುಗೆ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಪದಾಧಿಕಾರಿಗಳು ಮಂಗಳವಾರ ಶಾಲೆಗೆ ಧ್ವನಿವರ್ಧಕವನ್ನು ಕೊಡುಗೆ ನೀಡಿದರು.


ಎಸ್‌ಡಿಎಂಸಿ ನೂತನ ಅಧ್ಯಕ್ಷ ಎಸ್.ಪ್ರಕಾಶ್, ಉಪಾಧ್ಯಕ್ಷೆ ರೂಪಾ ಮಂಜೇಶ, ನಾಮನಿರ್ದೇಶನ ಸದಸ್ಯ ಸುರೇಶ ಸೇರಿದಂತೆ ಪದಾಧಿಕಾರಿಗಳು 35 ಸಾವಿರ ರೂ. ಮೊತ್ತದ ಸ್ಪೀಕರ್, ಮೈಕ್ ನೀಡಿದರು. ಶಾಲೆಯ ಪ್ರಾಂಶುಪಾಲೆ ಪ್ರಿಯದರ್ಶಿನಿ ಮಾತನಾಡಿ, ಕಳೆದ ವರ್ಷ ಇದೇ ಆಡಳಿತ ಮಂಡಳಿ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನೀರು ಶುದ್ಧೀಕರಣ ಯಂತ್ರ ಕೊಡುಗೆ ನೀಡಿದ್ದರು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಮೈಕ್ ಮತ್ತು ಸ್ಪೀಕರ್ ನೀಡಿದ್ದಾರೆ. ಆಡಳಿತ ಮಂಡಳಿ ಶಾಲೆಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸ ಎಂದರು.