ತಿ.ನರಸೀಪುರ ತಾಲೂಕು ಬನ್ನೂರು ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಆರ್.ಸೌಮ್ಯರಾಣಿ ಅವರನ್ನು ಸದಸ್ಯರು ಹಾಗೂ ಬೆಂಬಲಿಗರು ಅಭಿನಂದಿಸಿದರು. ಕೃಷ್ಣೇಗೌಡ, ಭಾಗ್ಯಾ, ಎಂ.ಕೆ.ಮಹೇಶ್, ರಾಮಸ್ವಾಮಿ ಇತರರು ಇದ್ದರು. 
ಜಿಲ್ಲೆ

ಬನ್ನೂರು ಪುರಸಭೆಗೆ ಸೌಮ್ಯರಾಣಿ ಉಪಾಧ್ಯಕ್ಷೆ

ತಿ.ನರಸೀಪುರ: ತಾಲೂಕಿನ ಬನ್ನೂರು ಪುರಸಭೆ ನೂತನ ಉಪಾಧ್ಯಕ್ಷರಾಗಿ ಎಂ.ಆರ್.ಸೌಮ್ಯರಾಣಿ ಅವಿರೋಧವಾಗಿ ಆಯ್ಕೆಯಾದರು.

ನಾಗರತ್ನ ಪ್ರಭಾಕರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ ಸ್ಥಾನಕ್ಕೆ ಗುರುವಾರ ಬನ್ನೂರು ಪಟ್ಟಣದ ಪುರಸಭಾ ಸಂಭಾಗಣದಲ್ಲಿ ಚುನಾವಣೆ ನಿಗದಿಯಾಗಿತ್ತು. ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್ ಸದಸ್ಯೆ ಎಂ.ಆರ್.ಸೌಮ್ಯರಾಣಿ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗದ್ದ ತಹಸೀಲ್ದಾರ್ ಸುರೇಶಾಚಾರ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ನೂತನ ಉಪಾಧ್ಯಕ್ಷೆ ಎಂ.ಆರ್ ಸೌಮ್ಯರಾಣಿ ಮಾತನಾಡಿ, ಪುರಸಭೆ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಸಹಮತದೊಂದಿಗೆ ಸರ್ಕಾರದಿಂದ ಬರುವ ಅನುದಾನ ಹಾಗೂ ಬಡವರು, ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಯೋಜನೆಗಳನ್ನು 23 ವಾರ್ಡ್‌ಗಳಿಗೂ ತಲುಪಿಸಿ ಉತ್ತಮವಾಗಿ ಕೆಲಸ ನಿರ್ವಹಿಸಲಾಗುವುದು ಎಂದರು.

23 ಸದಸ್ಯರ ಪೈಕಿ ಚುನಾವಣೆಯಲ್ಲಿ 18 ಸದಸ್ಯರು ಭಾಗವಹಿಸಿದ್ದರು. 5 ಸದಸ್ಯರು ಗೈರು ಹಾಜರಿಯಾಗಿದ್ದರು. ಪುರಸಭೆ ಅಧ್ಯಕ್ಷ ಕೃಷ್ಣೇಗೌಡ, ಭಾಗ್ಯಾ, ಎಂ.ಕೆ.ಮಹೇಶ್, ಟಿ.ಕೆ.ಆನಂದ್, ನಂಜುಂಡಸ್ವಾಮಿ, ಬಿ.ಆರ್.ಶ್ರೀನಿವಾಸ್, ಶೋಭಾ ಸತೀಶ್, ದಿವ್ಯಾ, ಭಾಗ್ಯಶ್ರೀ, ಬಿ.ಎಸ್.ಲೋಕಾಂಬಿಕ ಶಿವಮೂರ್ತಿ, ಪುಷ್ಪವತಿ, ಬಿ.ಕೆ.ಶಾಂತರಾಜು, ಶಿವಣ್ಣ, ಸಿ.ಎಚ್.ವಿಜಯಕುಮಾರ್, ಸಿ.ಸಿ. ಸುರೇಶ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.