ಮಂಡ್ಯ: ತಾಲೂಕಿನ ಸೂನಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಐದು ವರ್ಷದ ಅವಧಿಯ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಹಾಗೂ ಕಾಂಗ್ರೆಸ್‌ನ ನಾಲ್ವರು ನಿರ್ದೇಶಕರು ಆಯ್ಕೆಯಾಗಿದ್ದಾರೆ.
11 ನಿರ್ದೇಶಕ ಸ್ಥಾನದ ಆಯ್ಕೆಗೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಚಿಕ್ಕದೇವೇಗೌಡ, ಕುಮಾರ್, ನಾಗರಾಜು, ರಾಮಲಿಂಗೇಗೌಡ, ಕೃಷ್ಣೆಗೌಡ, ಲಕ್ಷ್ಮೀ, ಜಯಲಕ್ಷ್ಮಮ್ಮ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ಪುರುಷೋತ್ತಮ್, ಸುದರ್ಶನ್, ನಾಗಮ್ಮ, ಪುಟ್ಟಯ್ಯ ಆಯ್ಕೆಯಾದರು. ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 365 ಮತದಾರರು ಮತಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಸಂತೋಷ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.
ನೂತನ ನಿರ್ದೇಶಕರನ್ನು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವರದೇಗೌಡ, ಮುಖಂಡರಾದ ರಾಕೇಶ್, ರಾಮು, ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್, ಬೆಟ್ಟಹಳ್ಳಿ ಸಂತೋಷ್, ಹೊನ್ನೇಗೌಡ, ಕಾಂತರಾಜ್, ಶಿವು, ಡೇರಿ ಕಾರ್ಯದರ್ಶಿ ವರದೇಶ್ ಅಭಿನಂದಿಸಿದರು.