ಜಿಲ್ಲೆ

ಸದ್ಯದ್ಲಲಿಯೇ ಜಾರಿಯಾಗಲಿದೆ ಒಬ್ಬ ಪ್ರಯಾಣಿಕ ಒಂದು ಕಾರ್ಡ್ ವ್ಯವಸ್ಥೆ

ಬೆಂಗಳೂರು: ಮೆಟ್ರೋ ರೈಲು, ಕ್ಯಾಬ್, ಬಸ್ಸು ಸೇರಿ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ನೀಡುವ ಸೌಲಭ್ಯ ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.

ಬೆಂಗಳೂರು ಟೆಕ್ ಶೃಂಗಸಭೆಯ ಎರಡನೇ ದಿನವಾದ ಗುರುವಾರ ‘ಭವಿಷ್ಯದ ಸಂಚಾರಕ್ಕಾಗಿ ಸಮನ್ವಯ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು..

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಮುಂದಿನ 6 ತಿಂಗಳಲ್ಲಿ ವಿವಿಧ ಮಹಾನಗರಗಳಲ್ಲಿ ಜಾರಿಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದರು.