ಜಿಲ್ಲೆ

ಸೋನು ಆಕ್ಸಿಜನ್ ಪ್ಲಾಂಟ್ ವಾರದೊಳಗೆ ಆಗಮನ

Dakshina Kannada

ಮಂಗಳೂರು: ಕೋವಿಡ್ ಸಂಕಷ್ಟದ ಕಾಲದಲ್ಲಿ ಚಿತ್ರನಟ ಸೋನು ಸೂದ್ ಸಹಾಯ ಹಸ್ತ ಮತ್ತೊಮ್ಮೆ ದಕ್ಷಿಣ ಕನ್ನಡಕ್ಕೆ ದೊರೆಯಲಿದೆ.

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲು ಸೂಕ್ತ ಫ್ಲಾಟ್‌ಫಾರ್ಮ್ ನಿರ್ಮಿಸಲಾಗುತ್ತಿದ್ದು 2- 3 ದಿನಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ತಲುಪಲಿದೆ ಎಂದು ಸ್ಥಳೀಯ ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ. ಇದು ಒಟ್ಟು 60 ಲಕ್ಷ ಯೋಜನೆಯಾಗಿದ್ದು, 45 ಲಕ್ಷ ರೂ ಆರ್ಥಿಕ ನೆರವನ್ನು ಒದಗಿಸುತ್ತಿದ್ದಾರೆ.

ಉಳಿದ 15 ಲಕ್ಷ ರೂ.ವನ್ನು ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ನಿಧಿಯಿಂದ ಪೂರೈಸಲಾಗುತ್ತಿದೆ. ಈ ಪ್ಲಾಂಟ್‌ನಿಂದ 100 ಬೆಡ್‌ಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯಲ್ಲಿ ಸಕಾಲದಲ್ಲಿ ಸಿಲಿಂಡರ್ ಪೂರೈಕೆಯಾಗುತ್ತದೆಯೇ ಎಂಬ ಆತಂಕ ಇರುತ್ತದೆ. ಹೊಸ ವ್ಯವಸ್ಥೆಯಲ್ಲಿ ಆಕ್ಸಿಜೆನ್ ಸ್ಥಳದಲ್ಲಿಯೇ ತಯಾರಾಗುವುದರಿಂದ ಈ ಸಮಸ್ಯೆ ನಿವಾರಣೆಯಾಗಲಿದೆ.