???????????????????????????????????? 
ಜಿಲ್ಲೆ

ಹಾಡುಗಳ ಮೂಲಕ ಶೋಷಣೆ ವಿರುದ್ಧ ಧ್ವನಿ

ಮಾನ್ವಿ: ಗುಮ್ಮಡಿ ವಿಠಲರಾವ್ ಜನಪದ ಹಾಡುಗಳಿಂದ ವ್ಯವಸ್ಥೆ ಬದಲಾವಣೆಗೆ ಯತ್ನಿಸಿದ್ದರು. ಡಾ.ಬಿ.ಅರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹೇಳುತ್ತ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಕವಿ ಅಂಬಣ್ಣ ಅರೋಲಿಕರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿಪರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಗುಮ್ಮಡಿ ವಿಠಲರಾವ್ (ಗದ್ದರ್) ಶ್ರದ್ಧಾಂಜಲಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಗದ್ದರ್ ಶೋಷಿತರ ಧ್ವನಿಯಾಗಿದ್ದರು. ಜಾತಿ ವ್ಯವಸ್ಥೆ ಹಾಗೂ ತಾರತಮ್ಯ ನೀತಿಗಳ ವಿರುದ್ಧ ಹೋರಾಟ ನಡೆಸಿದ್ದರು. ಹಾಡುಗಳ ಮೂಲಕ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಗದ್ದರ್ ಹಾಡುಗಳು ಹಾಗೂ ಅವರ ಸರಳ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ನಾನು ಜಿಲ್ಲೆಯಲ್ಲಿ ದಲಿತ ಚಳವಳಿಯಲ್ಲಿ ನಾನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ದಲಿತ ಮುಖಂಡರಾದ ಯಲ್ಲಪ್ಪ ಬಾದರದಿನ್ನಿ. ರವಿಕುಮಾರ, ಆಕಾಶ್, ಹನುಮಂತ, ಲಕ್ಷ್ಮಣ ಜಾನೇಕಲ್, ಹುಸೇನಪ್ಪ, ಮಲ್ಲಪ್ಪ, ರವೀಂದ್ರ, ಪಿ.ರವಿಕುಮಾರ, ಶಿವಜ್ಞಾನಿ, ಶಿವರಾಜ, ಹನುಮೇಶ ನಾಯಕ, ಬಸವರಾಜ ಮೌನೇಶ, ಯೇಸಪ್ಪ, ಯಮನಪ್ಪ, ಗಣೇಶ ಇತರರಿದ್ದರು.