ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ. 16ರಂದು ಮಧ್ಯಾಹ್ನ 3 ಗಂಟೆಗೆ ಜಯಶ್ರೀ ಗುತ್ತಲ ದತ್ತಿ ನಿಮಿತ್ತ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಹಿಳಾ ಮಂಡಳ ಹಾಗೂ ಮಹಿಳಾ ಭಜನಾ ಮಂಡಳಗಳಿಗೆ ಜಾನಪದ ಸಾಹಿತ್ಯ ಸಂಸ್ಕೃತಿಯ ಮೂಲ ಜಾನಪದ ಸಂಪ್ರದಾಯ ಹಾಡುಗಳ ಸ್ಪರ್ಧೆ ಏರ್ಪಡಿಸಿದೆ. ಅದೇ ದಿನ ಸಂಜೆ ಬಹುಮಾನ ಹಾಗೂ ಪ್ರಥಮ ಸ್ಥಾನ ಪಡೆದ ಮಂಡಳಿಗೆ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ನೀಡಲಾಗುವುದು.
ಸ್ಪರ್ಧೆಯಲ್ಲಿ ಕುಟ್ಟುವ, ಬೀಸುವ ಹಾಗೂ ಸುಗ್ಗಿಯ ಹಾಡುಗಳು, ಕೋಲಾಟ ಪದ, ಗೀಗೀ ಪದ, ಲಾವಣಿ ಪದಗಳು ಹಾಗೂ ಜೋಗುಳ ಪದಗಳು, ಹರಿದಾಸರು, ಹರಿದಾಸ ಮಹಿಳೆಯರ ಹಾಗೂ ವಚನಕಾರರ ಹಾಡುಗಳನ್ನು ಪಸ್ತುತಪಡಿಸಬಹುದು. ಪ್ರತಿ ಮಂಡಳಗಳಿಂದ ಕನಿಷ್ಠ 5 ಜನ ಮಹಿಳೆಯರು ಒಂದು ಹಾಡನ್ನು 5 ನಿಮಿಷ ಪ್ರಸ್ತುತಪಡಿಸಬೇಕು.
ಆಸಕ್ತರು ಸೆ. 10ರೊಳಗೆ ಸಂದ ಕಚೇರಿಯಲ್ಲಿ ಮಂಡಳದ ಹೆಸರು, ವಿಳಾಸ, ದೂರವಾಣಿ ವಿವರಗಳೊಂದಿಗೆ ನೋಂದಾಯಿಸಬೇಕು ಎಂದು ಪ್ರಕಟಣೆ ತಿಳಿಸಿದೆ.