ಬದಿಯಡ್ಕ: ಪೈವಳಿಕೆ ಅಟ್ಟೆಗೋಳಿ ಸಮೀಪದ ಸೊಂದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಶುಕ್ರವಾರ ಆರಂಭಗೊಂಡು ಸೋಮವಾರ ಸಂಪನ್ನಗೊಂಡಿತು.
ಶುಕ್ರವಾರ ಹೊರೆಕಾಣಿಕೆ ಮೆರವಣಿಗೆ, ಶನಿವಾರ ಗಣಪತಿ ಹೋಮದೊಂದಿಗೆ ವಿವಿಧ ವೈದಿಕ, ಧಾರ್ಮಿಕ ವಿಧಿಗಳು ನಡೆಯಿತು. ಕೆ.ಕೆ.ಶೆಟ್ಟಿ ಮುಂಡಪ್ಪಳ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀಗಳು ಆಶೀರ್ವಚನ ನೀಡಿದರು. ಕಶೆಕೋಡಿ ಸೂರ್ಯನಾರಾಯಣ ಭಟ್, ಎಂ.ಎಸ್.ಮೂಡಿತ್ತಾಯ, ರಮೇಶ್ ಆಳ್ವ, ರಾಮಚಂದ್ರ ಹೊಳ್ಳ ಕಜೆ, ಡಾ.ಜಯಪ್ರಕಾಶ ನಾರಾಯಣ, ದಾಮೋದರ, ಮಧುಸೂದನ ಭಟ್, ವಿಜಯ ಪಂಡಿತ್ ಉಪ್ಪಳ, ಸತೀಶ್ ಕುಮಾರ್ ನಾಯ್ಕ, ಡಾ.ವಿಜಯ ನಾರಾಯಣ ಹೊಳ್ಳ ಕೆ. ಉಪಸ್ಥಿತರಿದ್ದರು.
ಭಾನುವಾರ ಗಣಪತಿ ಹೋಮ, ವಿವಿಧ ವೈದಿಕ ವಿಧಿಗಳು, ಭಜನೆ, ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ಮಾತೃ ಸಮಾವೇಶದಲ್ಲಿ ಒಡಿಯೂರಿನ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು. ಮೀರಾ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಕಾರಂತ, ಶಶಿಕಲಾ ಸುವರ್ಣ, ರಮ್ಯಾ ಎನ್., ಡಾ.ವನಿತಾ ಶೆಟ್ಟಿ ಇದ್ದರು.
ಸೋಮವಾರ ಗಣಪತಿ ಹೋಮ, ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ ಉಳಾಲು ಪೊಯ್ಯಕಂಡ ರವಿರಾಜ ಕಡಮಣ್ಣಾಯರ ನೇತೃತ್ವದಲ್ಲಿ ನೆರವೇರಿತು. ಬಳಿಕ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಮುರಳೀಕೃಷ್ಣ ಹಸಂತಡ್ಕ, ನಾರಾಯಣ ಹೆಗ್ಡೆ, ಪ್ರಭಾಕರ ಆಳ್ವ, ರಾಧಾಕೃಷ್ಣ ಹೊಳ್ಳ, ಕೃಷ್ಣ ಶಿವಕೃಪಾ, ಭಾಸ್ಕರ ರೈ, ವಿವೇಕ್ ಭಂಡಾರಿ, ಸದಾನಂದ ಸುಲಾಯ ಉಪಸ್ಥಿತರಿದ್ದರು. ರಾತ್ರಿ ದೇವರ ಉತ್ಸವ ಬಲಿ ನಡೆಯಿತು.