ಬೈಲಹೊಂಗಲ: ತಾಲೂಕಿನ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವವು ೆ.28ರಿಂದ ಮಾ.1ರವರೆಗೆ ಜರುಗಲಿರುವ ಕಾರಣ ಮಲ್ಲಮ್ಮನ ತವರೂರು ಶಿರಸಿ ತಾಲೂಕಿನ ಸೋಂದಾ ಗ್ರಾಮಕ್ಕೆ ಮಲ್ಲಮ್ಮನ ಜ್ಯೋತಿ ತರಲು ವಾಹನವು ಮಂಗಳವಾರ ತೆರಳಿತು. ಗ್ರಾಮಸ್ಥರು, ಗ್ರಾಪಂ ಆಡಳಿತ ಮಂಡಳಿ ಪೂಜೆ ಸಲ್ಲಿಸಿ ಬೀಳ್ಕೊಟ್ಟಿತು.
ಮಲ್ಲಮ್ಮ ಜ್ಯೋತಿಯು ಸೋಂದಾ ಗ್ರಾಮದಿಂದ ಮರಳಿ ೆ.26 ಹೊರಟು ಯಲ್ಲಾಪುರ, ಹಳಿಯಾಳ, ಅಳ್ನಾವರ, ನಂದಗಡ, ಖಾನಾಪುರ, ಬೆಳಗಾವಿ ಮಾರ್ಗವಾಗಿ 27ರಂದು ಸಂಜೆ 4 ಗಂಟೆಗೆ ಬೆಲಹೊಂಗಲ ಪಟ್ಟಣಕ್ಕೆ ಆಗಮಿಸಿ ಸಿದ್ದಸಮುದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿ 28 ರಂದು ಬೆಳಗ್ಗೆ 10 ಗಂಟೆಗೆ ಬೆಳವಡಿ ಮಲ್ಲಮ್ಮ ವತ್ತಕ್ಕೆ ಆಗಮಿಸಲಿದೆ.
ಉತ್ಸವದ ಪೂರ್ವಭಾವಿ ಶಾಂತಿಪಾಲನೆ ಸಭೆಯಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಗ್ರಾಮಸ್ಥರು ಯಾವುದೇ ಅಹಿತಕರ ಟನೆ ನಡೆಯದಂತೆ ಉತ್ಸವ ಜರುಗಲು ಸಹಕರಿಸಬೇಕು. ಎಲ್ಲರೂ ಸೇರಿ ಅಭಿಮಾನದಿಂದ, ಶಾಂತಿಯುತವಾಗಿ ಉತ್ಸವ ಆಚರಿಸೋಣ ಎಂದರು.
ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಚಪ್ಪ ಮಟ್ಟಿ, ಗ್ರಾಪಂ ಸದಸ್ಯ ಬಸಯ್ಯ ವಿರಕ್ತಮಠ, ಜೆನೂಲಸಾಬ್ ಕಿತ್ತೂರ, ಪ್ರಕಾಶ ಹುಂಬಿ ಮಾತನಾಡಿ, ಉತ್ಸವ ನಿಮಿತ್ತ ಪಟ್ಟಣ ಸ್ವಚ್ಛ ಮಾಡಿ ಗ್ರಾಮವನ್ನು ಸಿಂಗರಿಸೋಣ ಎಂದರು.
ಪಿಡಿಒ ಜಿ.ಐ. ಬರಗಿ, ಪಿಎಸ್ಐಗಳಾದ ಉಮಾ ಗೋರಬಾಳ, ಗಂಗಾಧರ ಹಂಪನ್ನವರ, ಶಂಕರಯ್ಯ ಗುಡ್ಡದಮಠ, ಪ್ರಕಾಶ ಬಳಿಗಾರ, ವಿಶ್ವನಾಥ ಕರೀಕಟ್ಟಿ, ಪ್ರಕಾಶ ಕಾರಿಮನಿ, ದಳಪತಿ ಕರೀಕಟ್ಟಿ, ರಾಚಯ್ಯ ರೊಟ್ಟಯ್ಯನವರ, ಮಂಜುನಾಥ ಉದೋಜಿ,ಪ್ರಕಾಶ ಬಳಿಗಾರ, ಎಂ.ಬಿ.ಉಪ್ಪಿನ, ಬಿ.ಜಿ.ದೆಗಾಂವಿ, ರಾಚಪ್ಪ ಮಟ್ಟಿ, ಮಂಜುನಾಥ ಸಿದ್ದನ್ನವರ, ಪ್ರವಿಣ ಲಪ್ಪನವರ, ಚಂದ್ರು ಶಳೆಕನ್ನವರ, ಅಮತ ಉಳ್ಳಾಗಡ್ಡಿ, ನಾಗಪ್ಪ ಕಿರಕಸಾಲಿ, ರವಿ ಸಿದ್ದನ್ನವರ ಇತರರಿದ್ದರು.