ಜಿಲ್ಲೆ

'We miss you and we love you bro' ಹ್ಯಾಪಿ ರಕ್ಷಾಬಂಧನ; ದರ್ಶನ್‌ಗೆ ರಾಖಿ ವಿಶ್‌ ಮಾಡಿದ ನಟಿ ಸೋನಲ್‌

Webdesk - Savina Naik

ಬೆಂಗಳೂರು: ಪ್ರೀತಿ, ರಕ್ಷಣೆ, ಬದ್ಧತೆಯನ್ನು ಪ್ರತಿಬಿಂಬಿಸುವ ಹಬ್ಬ ರಕ್ಷಾಬಂಧನವಾಗಿದೆ. ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಈ ಹಬ್ಬದಂದು ಸೋನಲ್ ಮೊಂಥೆರೋ ಅವರು ದರ್ಶನ್​ನಲ್ಲಿ ಜೈಲಿನಲ್ಲಿರುವ ಅಣ್ಣ ದರ್ಶನ್​​ ಅವರನ್ನು ನೆನಪು ಮಾಡಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಈ ವಿಶೇಷ ಸಂದರ್ಭದಲ್ಲಿ ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ನಾವು ನಿಮ್ಮನ್ನು ಪ್ರೀತಿಸುತ್ತೇವೆ ಅಣ್ಣ. ರಕ್ಷಾಬಂಧನದ ಶುಭಾಶಯಗಳು ಎಂದು ದರ್ಶನ್‌ಗೆ ನಟಿ ಶುಭಕೋರಿದ್ದಾರೆ.

‘ರಾಬರ್ಟ್’ ಸಿನಿಮಾದ ವೇಳೆ ಸೋನಲ್​ ಅವರಿಗೆ ದರ್ಶನ್​ ಪರಿಚಯ. ದರ್ಶನ್ ಜೊತೆಗಿನ ಸಹೋದರತ್ವದ ಒಡನಾಟ ಇಂದಿಗೂ ಮುಂದುವರೆದಿದೆ. ಪ್ರತಿ ವರ್ಷ ದರ್ಶನ್ ಮನೆಗೆ ತೆರಳಿ ನಟಿ ರಾಕಿ ಕಟ್ಟಿ ಶುಭಕೋರುತ್ತಿದ್ದರು. ಈ ವರ್ಷ ದರ್ಶನ್ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆ.11ರಂದು ತರುಣ್ ಸುಧೀರ್ ಜೊತೆ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಸೆಟ್‌ನಲ್ಲಿ ಆದ ಪರಿಚಯ ದರ್ಶನ್‌ರಿಂದ ಮದುವೆಗೆ ಮುನ್ನುಡಿ ಬರೆಯಿತು.

ಸೋನಲ್ ಹಾಗೂ ದರ್ಶನ್ ನಡುವೆ ಉತ್ತಮ ಒಡನಾಟವಿದೆ. ಸದಾ ಅಣ್ಣಾ ಎಂದು ಬಾಯಿತುಂಬಾ ಕರೆಯುತ್ತಾರೆ. ಆದರೆ ಇತ್ತೀಚೆಗೆ ನಡೆದ ಸೋನಲ್ ಹಾಗೂ ತರುಣ್ ಸುಧೀರ್ ಮದುವೆ ಸಮಾರಂಭದಲ್ಲಿ ಕೂಡ ದರ್ಶನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತರುಣ್ ಹಾಗೂ ದರ್ಶನ್ ಸ್ನೇಹ ಕೂಡ ಬಹಳ ಹಳೆಯದು. ಹೀಗೆ ಬಹಳ ಆಪ್ತರಾದ ಜೋಡಿಯ ಮದುವೆಗೆ ದರ್ಶನ್ ಭಾಗಿ ಆಗಲು ಸಾಧ್ಯವಾಗಲಿಲ್ಲ

ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ ನಟ ದರ್ಶನ್​​ ಅವರು ಜೈಲಿನಲ್ಲಿದ್ದಾರೆ ಈ ಪ್ರಕರಣದ ತನಿಖೆ ಹಂತದಲ್ಲಿದೆ.