ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹುಲಿ ಪೆಂಡೆಂಟ್ ಧರಿಸಿರುವ ಫೋಟೋಗಳು ವೈರಲ್ ಆಗಿದ್ದವು. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಮದುವೆ ಸಮಯದಲ್ಲಿ ಯಾರೋ ಗಿಫ್ಟ್ ಕೊಟ್ಟಿದ್ದರು ಅಂತ ಹಾಕಿಕೊಂಡಿದ್ದನು. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್ ನದ್ದು, ಅದು ಒರಿಜಿನಲ್ ಅಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಸಸ್ಯಾಹಾರಿ. ಹುಲಿ, ಜಿಂಕೆ, ಕೋಳಿ ಇನ್ಯಾವುದೇ ಬಲಿಯನ್ನು ಇಷ್ಟಪಡಲ್ಲ. ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡ್ತಿನಿ ಎಂದು ತಿಳಿಸಿದರು.
ಮೂರು ವರ್ಷಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಂಚಿಕೊಂಡಿದ್ದ ತಮ್ಮ ಮದುವೆಯ ಫೋಟೋ ಆಲ್ಬಂಗಳಲ್ಲಿ ಅವರ ಪುತ್ರ ಮೃಣಾಲ್ ಹುಲಿ ಪೆಂಡೆಂಟ್ ಧರಿಸಿರುವ ಚೈನ್ ಹಾಕಿರುವುದು ಕಂಡುಬಂದಿತ್ತು.
ನಿವಾಸದಲ್ಲಿ ಪರಿಶೀಲನೆ
ಬೆಳಗಾವಿಯ ಕುವೆಂಪು ನಗರದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸಕ್ಕೆ ಆಗಮಿಸಿರುವ ಅರಣ್ಯಾಧಿಕಾರಿಗಳು ಹುಲಿ ಗುರು ಹೋಲುವ ಪೆಂಡೆಂಟ್ ಪರಿಶೀಲನೆ ನಡೆಸುತ್ತಿದ್ದಾರೆ.
ಇವರ ಕೊರಳಲ್ಲಿಯೂ ಇದೆ ಹುಲಿ ಉಗುರು ಲಾಕೆಟ್...
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲಿ, ಹುಬ್ಬಳ್ಳಿಯ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಲಾಕೆಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿದ್ದು, ಭಾರೀ ಸದ್ದು ಮಾಡ್ತಿದೆ.
ಅರಣ್ಯಾಧಿಕಾರಿಗಳ ಮಹತ್ವದ ಸಭೆ
ಹುಲಿ ಉಗುರು ಅಕ್ರಮ ಶೇಖರಣೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಎಲ್ಲಾ ಅಧಿಕಾರಿಗಳ ಸಭೆಯನ್ನು ವನ್ಯಜೀವಿ ವಿಭಾಗ ಅಪರ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಕುಮಾರ್ ಪುಷ್ಕರ್ ಕರೆದಿದ್ದಾರೆ. ಮೀಟಿಂಗ್‌ಗೆ ಖುದ್ದು ಹಾಜರಾಗಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.