ವಿಜಯವಾಣಿ ಸುದ್ದಿಜಾಲ ಉಡುಪಿ
ಜನ್ಮಕೊಟ್ಟ ತಾಯಿಯನ್ನೇ ಪುತ್ರನೋರ್ವ ಮನೆಯಿಂದ ಎಳೆದು ತಂದು ಗಿಡ-ಗಂಟಿಗಳು ಆವರಿಸಿಕೊಂಡಿದ್ದ ಬೃಹತ್ ಪೊದೆಯೊಳಗೆ ಬಿಟ್ಟುಹೋದ ಅಮಾನವೀಯ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಇಂದ್ರಾಳಿ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ವೃದ್ಧಳಾದ ತಾಯಿಯನ್ನು ಪುತ್ರನೇ ಪೊದೆಯೊಳಗೆ ನೂಕಿ, ಪರಾರಿಯಾಗಿದ್ದಾನೆ. ಸೋಮವಾರ (ಅ.13) ಬೆಳಗ್ಗೆ ರೈಲು ಹಳಿಗಳ ತಪಾಸಣೆಗೆ ಸಾಗುತ್ತಿದ್ದ ಗಸ್ತು ಸಿಬ್ಬಂದಿಗೆ ಪೊದೆಯೊಳಗೆ ವೃದ್ಧೆ ಇರುವುದು ಕಂಡು ಬಂದಿದೆ. ಕೂಡಲೇ ಅವರು ರೈಲ್ವೆ ಆರ್ಪಿಎಫ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವೃದ್ಧೆಯ ಎಡಗೈ ಮುಂಭಾಗದಲ್ಲಿ ಕತ್ತರಿಸಿದ ರೀತಿಯಲ್ಲಿ ಗಾಯವಾಗಿದ್ದು, ಪುತ್ರ ಹಲ್ಲೆ ನಡೆಸಿದ್ದಾನೆಯೋ ಅಥವಾ ಬಿದ್ದು ಗಾಯಗೊಂಡಿದ್ದಾಳೋ ಎಂದು ತಿಳಿದು ಬಂದಿಲ್ಲ.