ಜಿಲ್ಲೆ

ಕುಡಿಯಲು ಹಣ ಕೊಡದ ತಾಯಿ ಕೊಂದ ಮಗ

ಗಂಗಾಧರ ಬಿ ವಿ

ರಾಮನಗರ : ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಮಗನೇ ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ನಿರ್ಧಯವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಸರೋಜಮ್ಮ (65) ಮಗನಿಂದಲೇ ಕೊಲೆಯಾದ ದುದೆÀðÊವಿ ತಾಯಿ, ಅನಿಲ್‌ಕುಮಾರ್ (43) ತನ್ನ ಹೆತ್ತ ತಾಯಿಯನ್ನು ಕೊಂದ ಕಿರಾತಕ ಮಗ.
ಕುಡಿತಕ್ಕೆ ದಾಸನಾಗಿದ್ದ ಅನಿಲ್ ಕುಮಾರ್ ಮಧ್ಯ ಸೇವನೆ ಮಾಡಲು ತಾಯಿಯ ಬಳಿ ಹಣಕ್ಕಾಗಿ ಪ್ರತಿದಿನ ಪೀಡಿಸುತ್ತಿದ್ದ ಎನ್ನಲಾಗಿದೆ. ಗುರುವಾರ ಆರೋಪಿ ತಾಯಿ ಬಳಿ ಹಣ ಕೇಳಿದ ಸಂಧರ್ಭದಲ್ಲಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಗುರುವಾರ ಸಂಜೆ ತಾಯಿಗೆ ಮಾರಕಾಸ್ತçದಿಂದ ಹಲ್ಲೆ ನಡೆಸಿ ಸಾಯಿಸಿದ್ದಾನೆ.
ಮನೆಯಲ್ಲೇ ತಾಯಿಯನ್ನು ಕೊಲೆಮಾಡಿದ ಪಾಪಿ ಮಗ ಬಾಗಿಲು ಹಾಕಿ ಹೊರಗಡೆ ಕೈಯಲ್ಲಿ ಮಾರಕಾಸ್ತç ಹಿಡಿದು ಕುಳಿತಿದ್ದ ಎನ್ನಲಾಗಿದೆ. ಈ ವೇಳೆ ಗ್ರಾಮಾಂತರ ಪೋಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಹೋಗಿ ಅನಿಲ್‌ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬAಧ ರಾಮನಗರ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್‌ಗೌಡ, ಡಿವೈಎಸ್ಪಿ ಶ್ರೀನಿವಾಸ್, ರಾಮನಗರ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಲೆಕ್ಟರ್ ರಮೇಶ್ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.