ಜಿಲ್ಲೆ

ಮೊಬೈಲ್ ವಿಚಾರಕ್ಕೆ ತಂದೆ ಕೊಲೆಗೈದ ಪುತ್ರ

ಆರ್.ಕೃಷ್ಣ

ಮೈಸೂರು: ಮೊಬೈಲ್ ವಿಚಾರಕ್ಕೆ ತಂದೆಯನ್ನೆ ಎರಡನೇ ಪತ್ನಿಯ ಪುತ್ರ ಕೊಲೆಗೈದು ಪರಾರಿಯಾಗಿದ್ದಾನೆ.

ಶಾಂತಿನಗರದ ಬೀಡಿ ಕಾಲನಿಯ ಸೈಯದ್ ಮುತ್ತಿಫ್ (38) ಕೊಲೆಯಾದ ವ್ಯಕ್ತಿ. ಈತನ ಎರಡನೇ ಹೆಂಡತಿ ಮಗ ಮತೀನ್ ಕೊಲೆ ಆರೋಪಿ.

ರಂಜಾನ್ ಸಮಯದಲ್ಲಿ ಮೊಬೈಲ್ ವಿಚಾರಕ್ಕೆ ತಂದೆ, ಮಗನ ನಡುವೆ ಗಲಾಟೆ ನಡೆದಿತ್ತು ಎಲಾಗಿದೆ. ಇದೇ ದ್ವೇಷ ಇಟ್ಟುಕೊಂಡಿದ್ದ ಮಗ, ಭಾನುವಾರ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾನೆ. ಎರಡನೇ ಪತ್ನಿ ಮನಗೆ ಹೋದಾಗ ಮತೀನ್, ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.