ಜಿಲ್ಲೆ

ಪುತ್ರನಿಂದ ಮದ್ಯವ್ಯಸನಿ ತಂದೆಯ ಕೊಲೆ

ಶಶಿಧರ ಎಲ್

ಲಿಂಗಸುಗೂರು: ತಾಯಿ-ಸಹೋದರಿಯನ್ನು ನಿಂದಿಸಿ, ಕಿರುಕುಳ ನೀಡುತ್ತಿದ್ದ ತಂದೆಯನ್ನು ಆತನ ಮಗನೇ ಭಾನುವಾರ ರಾತ್ರಿ ಕೊಲೆ ಮಾಡಿದ್ದಾನೆ. ಗ್ರಾಮದ ತಿಮ್ಮಣ್ಣ ರಂಗಪ್ಪ ಬಂಡಿ (59) ಕೊಲೆಗೀಡಾದ ವ್ಯಕ್ತಿ.

ಇವರ ಮಗ ಶೀಲವಂತ ತಿಮ್ಮಣ್ಣ ಬಂಡಿ (39) ಕೊಲೆ ಆರೋಪಿ. ಕುಡಿತದ ಚಟಕ್ಕೆ ಬಲಿಯಾಗಿದ್ದ ತಿಮ್ಮಣ್ಣ, ಹೊಲ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನೆಲ್ಲ ಹಾಳು ಮಾಡಿದ್ದ. ಅಲ್ಲದೆ ಪತ್ನಿ-ಮಗಳಿಗೆ ದಿನವೂ ನಿಂದಿಸುತ್ತ ಕಿರುಕುಳ ನೀಡುತ್ತಿದ್ದ. ಭಾನುವಾರ ರಾತ್ರಿಯೂ ಕುಡಿಯಲು ಹಣ ಕೊಡುವಂತೆ ಪೀಡಿಸಿದ್ದ.

ಈತನಿಗೆ ಬುದ್ಧಿ ಹೇಳಲು ಮುಂದಾದ ಮಗನ ಮೇಲೂ ಹಲ್ಲೆ ಮಾಡಿ, ನಿಂದಿಸಿದ್ದ. ಇದರಿಂದ ಕೋಪಗೊಂಡ ಶೀಲವಂತ, ಕಲ್ಲಿನಿಂದ ತನ್ನ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ತಿಮ್ಮಣ್ಣನ ಪತ್ನಿ ಗೌರಮ್ಮ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.