ವಿಜಯಪುರ: ಕೊಲ್ಹಾರ ತಾಲೂಕು ದಲಿತ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಸೋಮು ಸಾಗರ ನೇಮಕಗೊಂಡಿದ್ದಾರೆ.
ಕ್ರೀಯಾಶೀಲರು, ದಲಿತ ಸಾಹಿತ್ಯ ಪರ ಒಲವುಳ್ಳವರು ಆಗಿರುವ ಸೋಮು ಸಾಗರ ಮುಂದಿನ ಮೂರು ವರ್ಷದ ಅವಧಿಗೆ ದಲಿತ ಸಾಹಿತ್ಯ ಪರಿಷತ್‌ನ ಕೊಲ್ಹಾರ ತಾಲೂಕಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಸ್ಥಳೀಯವಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ರೂಪಿಸುವುದು, ದಲಿತ ಸಾಹಿತ್ಯವನ್ನು ಪ್ರಚುರಗೊಳಿಸುವುದು ಮತ್ತು ದಲಿತರ ನೋವು-ನಲಿವುಗಳ ಬಗ್ಗೆ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮುಂತಾದ ಚಟುವಟಿಕೆ ಹಮ್ಮಿಕೊಳ್ಳಲು ಸೋಮು ಸಾಗರ ಅವರಿಗೆ ಪರಿಷತ್ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಸೋಮು ಸಾಗರ ಕಾರ್ಯೋನ್ಮುಖರಾಗಲಿದ್ದಾರೆಂದು ದಲಿತ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವರಾಜ ಸಾಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.