ಜಿಲ್ಲೆ

ಯಾವುದೋ ವಿಷಯ ಮನಸ್ಸಿಗೆ ಹೊಚ್ಚಿಕೊಂಡು ಅಕೌಟೆಂಟ್​ ಆತ್ಮಹತ್ಯೆ

Haveri - Kariyappa Aralikatti

ಹಾವೇರಿ: ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಸಹಕಾರಿ ಸಂಘದ ಅಕೌಟೆಂಟ್​ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ಗುರುವಾರ ನಡೆದಿದೆ.

ಹೊಸರಿತ್ತಿ ಗ್ರಾಮದ ವಿವಿದ್ದೋದೇಶ ಪ್ರಾಥಮಿಕ ಮತ್ತು ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಅಕೌಟೆಂಟ್​ ಬಸವರಾಜ ನಾಗೇಂದ್ರಪ್ಪ ಬಡಿಗೇರ (38) ಮೃತ ವ್ಯಕ್ತಿ.

ಇವರು ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಸರಿಯಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲಿರುತ್ತಿದ್ದರು. ಬಟ್ಟೆ ಐರನ್​ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೋಗಿ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.