ರಾಣೆಬೆನ್ನೂರ: ಯಾವುದೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹುಲಿಹಳ್ಳಿ ಬಳಿ ಎನ್ಎಚ್-&48ರಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಹೊಸಹುಲಿಹಳ್ಳಿಯ ಶಿವಪ್ಪ ದ್ಯಾಮಪ್ಪ ಬಾಕಿರ್ ಮೃತ ವ್ಯಕ್ತಿ.
ಇವರು ಬೈಕ್ ಮೇಲೆ ರಾಣೆಬೆನ್ನೂರ ಕಡೆಯಿಂದ ಹುಲಿಹಳ್ಳಿಗೆ ತೆರಳುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.