filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39; 
ಜಿಲ್ಲೆ

ಸೋಮಯ್ಯ ಸ್ವಾಮೀಜಿ ಚಿಂತನೆ ಪ್ರಸ್ತುತ

ಇಟಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸೋಮಯ್ಯ ಸ್ವಾಮೀಜಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಥಳಿಯ ಸೋಮಲಿಂಗೇಶ್ವರ ಆಶ್ರಮದ ಚಿಕ್ಕಮಠದ ಪೀಠಾಧ್ಯ ಅದಶ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ತೋಲಗಿ ಗ್ರಾಮದ ಸೋಮಲಿಂಗೇಶ್ವರ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೀರ್ತನ ಕೇಸರಿ ಸೋಮಯ್ಯ ಸ್ವಾಮೀಜಿ 32ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂ. ಸೋಮಯ್ಯ ಶ್ರೀಗಳ ಕೀರ್ತನೆಗಳ ಚಿಂತನೆಗಳು ಜನರ ಮನ ಮುಟ್ಟುವಂತಿವೆ ಎಂದರು. ಹಿರೇಮುನವಳ್ಳಿ&ಪಾರಿಶ್ವಾಡ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕಂಕಣವಾಡಿ ಶಿವಾನಂದ ಶರಣರು, ಬ್ರಹ್ಮಾನಂದ ಸ್ವಾಮೀಜಿ, ಬೆನವಾಡದ ರಾಮಾನಂದ ಶರಣರು, ಲಿಂಗಾನಂದ ಭಾರತಿ ಸ್ವಾಮೀಜಿ, ಶಿವಲಿಂಗಯ್ಯ ಅಲಯ್ಯನವರಮಠ, ಸಂಜಯ ಕುಬಲ, ಮಹಾರುದ್ರಯ್ಯ ಹಿರೇಮಠ, ಸಂಜೀವ ಸೊನಪ್ಪನವರ ಇತರರಿದ್ದರು. ಶಿಕ ಮಲ್ಲೇಶಿ ನಡುವಿನಮನಿ ನಿರೂಪಿಸಿದರು. ಶಂಕರಯ್ಯ ಚಿಕ್ಕಮಠ ವಂದಿಸಿದರು.