ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ದೀಪಕ್ ಕಠಾರೆ, ಪರಶುರಾಮ ದಲಬಂಜನ್, ಪ್ರಮೋದ್ ಮೇಘರಾಜ ಇದ್ದರು. 
ಜಿಲ್ಲೆ

ಎಸ್‌ಎಸ್‌ಕೆ ಸಮಾಜಕ್ಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ

ಹಗರಿಬೊಮ್ಮನಹಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್‌ಎಸ್‌ಕೆ) ಸಮಾಜದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಲು ಒತ್ತಾಯಿಸಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಸೋಮವಾರ ಮನವಿ ಸಲ್ಲಿಸಿದರು.

ವಾಹಿನಿಗೆ ಬರಲು ಅಭಿವೃದ್ಧಿ ನಿಗಮ ಸ್ಥಾಪಿಸಿ

ಬಳಿಕ ತಾಲೂಕು ಘಟಕದ ಅಧ್ಯಕ್ಷ ರಂಗನಾಥಸಾ ಕಠಾರೆ ಮಾತನಾಡಿ, ಕ್ಷತ್ರಿಯ ಸಮಾಜದ ಉಪಪಂಗಡವಾದ ಎಸ್‌ಎಸ್‌ಕೆ ಸಮಾಜ ಮುಖ್ಯ ವಾಹಿನಿಗೆ ಬರಲು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸರ್ಕಾರ ಆಚರಿಸಬೇಕು. ಹುಬ್ಬಳ್ಳಿ ಅಥವಾ ರಾಜ್ಯದಲ್ಲಿನ ವಿಮಾನ ನಿಲ್ದಾಣಕ್ಕೆ ಸಹಸ್ರಾರ್ಜುನ ಮಹಾರಾಜರ ಹೆಸರನ್ನು ನಾಮಕರಣ ಮಾಡಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಮಹಾರಾಜರ ಪುತ್ಥಳಿ ಸಹಿತ ವೃತ್ತಗಳನ್ನು ನಿರ್ಮಾಣಗೊಳಿಸಬೇಕು.

ಆರ್ಥಿಕ ಯೋಜನೆ ಸೌಲಭ್ಯ ಕಲ್ಪಿಸಿ

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಆಶ್ರಯ, ಗಂಗಾಕಲ್ಯಾಣ ಸೇರಿ ಆರ್ಥಿಕ ಯೋಜನೆಗಳಲ್ಲಿ ಕ್ಷತ್ರಿಯ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸಮಾಜದ ತಾಲೂಕ ಘಟಕದ ಉಪಾಧ್ಯಕ್ಷ ಗೋವಿಂದಸಾ ಕಾಟ್ವಾ, ಕಾರ್ಯದರ್ಶಿ ಲಕ್ಷ್ಮೀ ಕಾಂತಸಾ ಭಾವಿಕಟ್ಟಿ, ಪುರಸಭೆ ಸದಸ್ಯ ದೀಪಕ್ ಕಠಾರೆ, ಮುಖಂಡರಾದ ಗಣಪತಸಾ ಹಬೀಬ, ರಾಜು ಮೇಘರಾಜ, ಪ್ರಮೋದ್ ಮೇಘರಾಜ, ವಸಂತ ಜಿತೂರಿ, ಡಾ.ಹರೀಶ್ ಕಾಟ್ವಾ, ಬಾಲಕೃಷ್ಣಸಾ ದಲಬಂಜನ್, ಪರಶುರಾಮ ದಲಬಂಜನ್, ಉಮಾಕಾಂತಸಾ ಮೇಘರಾಜ, ಯಲ್ಲಪ್ಪ ಜಿತೂರಿ