ಹುಣಸೂರು ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಎಚ್.ಎಸ್.ಸೋಮಶೇಖರ್ ಆಯ್ಕೆಯಾದರು. ಡಾ.ವೃಷಬೇಂದ್ರಸ್ವಾಮಿ, ಬಸಮಣಿ, ಗುರುಸ್ವಾಮಿ ಇತರರಿದ್ದರು. 
ಜಿಲ್ಲೆ

ಸೋಮಶೇಖರ್ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಹುಣಸೂರು: ವೀರಶೈವ ಮಹಾಸಭೆಯ ಹುಣಸೂರು ತಾಲೂಕು ಘಟಕದ ಅಧ್ಯಕ್ಷರಾಗಿ ಎಚ್.ಎಸ್.ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಗರದ ಗುರುಬೂದಿಮಂಗಳ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ ಒಬ್ಬರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಮಹಾಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಾಬಗೆರೆ ರಮೇಶ್‌ಕುಮಾರ್, ಭಾಗ್ಯಕುಮಾರ್, ದೇವರಾಜು, ಜಯಣ್ಣ, ಎಂ.ಆರ್.ಜಗದೀಶ್, ಸೋಮಣ್ಣ, ಕೆ.ಸಿ.ಮಹದೇವಪ್ಪ, ಪರಮೇಶ, ಎಚ್.ಬಿ.ಶೇಖರಾಜು, ಚಂದ್ರಶೇಖರ್, ಲೋಕೇಶ್. ಬಿ.ಎಚ್,ಪುಟ್ಟನಿಂಗಪ್ಪ, ಪರಮೇಶ್, ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಬಸಮಣಿ, ಎಂ.ಸುಮಿತ್ರಾ, ವಿನೋದಾ, ಭಾಗ್ಯಾ, ವಿ.ರಾಣಿ, ಗೌರಮ್ಮ ಮತ್ತು ಎಸ್.ಆರ್.ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮೋದೂರು ಮಹೇಶಾರಾಧ್ಯ ಘೋಷಿಸಿದರು.