ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಿದ್ದು ಡಿ.26ರಿಂದ ಜ.21ರವರೆಗೆ "ಲೋಕ' ಪರ್ಯಟನೆ ಕೈಗೊಳ್ಳುವರು.
ಮೊದಲ ಹಂತದಲ್ಲಿ ಪ್ರತಿ ಹೋಬಳಿಗಳಿಗೂ, ಆನಂತರ ಗ್ರಾಮಗಳಿಗೂ ಭೇಟಿ ನೀಡುವ ಸಂಕಲ್ಪ ಮಾಡಿರುವ ಸೋಮಣ್ಣ 26ರಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿನಿಧಿಸುವ ಕ್ಷೇತ್ರ ಮಧುಗಿರಿ ಹಾಗೂ 27ರಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕ್ಷೇತ್ರ ಕೊರಟಗೆರೆಯಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷವೆನಿಸಿದೆ.
ಮೊದಲ ಹಂತದಲ್ಲಿ ಸೋಮಣ್ಣ ತುಮಕೂರು ನಗರ ಹೊರತುಪಡಿಸಿ ಉಳಿದ 7 ವಿಧಾನಸಭಾ ಕ್ಷೇತ್ರಗಳಿಗೆ ಎರಡೆರಡು ಬಾರಿ ಭೇಟಿ ನೀಡಲಿದ್ದಾರೆ. ಒಂದು ತಾಲೂಕಿನಲ್ಲಿ ಒಮ್ಮೆ ಪ್ರತ್ಯೇಕ 2 ಹೋಬಳಿಯ 2 ಪಂಚಾಯತಿಯಂತೆ ಎರಡು ಬಾರಿಯಲ್ಲಿ ಪ್ರತಿ ತಾಲೂಕಿನ 4 ಕಡೆಗಳಿಗೆ ಭೇಟಿ ನೀಡುವರು.
ಡಿ.26 ಬಡವನಹಳ್ಳಿ ಮತ್ತು ಮಿಡಿಗೇಶಿ ಗ್ರಾಪಂ ಆವರಣ (ಮಧುಗಿರಿ ತಾ)
ಡಿ.27 ಕೋಳಾಲ ಮತ್ತು ತುಂಬಾಡಿ ಗ್ರಾಪಂ ಆವರಣ (ಕೊರಟಗೆರೆ ತಾ)
ಡಿ.28 ದಬ್ಬೇಟ್ಟ ಮತ್ತು ಮಾಯಸಂದ್ರ ಗ್ರಾಪಂ ಆವರಣ (ತುರುವೇಕೆರೆ ತಾ)
ಜ.2 ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹುಳಿಯಾರು ಮತ್ತು ಕಂದಿಕೆರೆ ಗ್ರಾಪಂ ಆವರಣ (ಚಿ.ನಾ.ಹಳ್ಳಿ.ತಾ)
ಜ.3 ಜಿ.ಹೊಸಹಳ್ಳಿ ಮತ್ತು ಚೇಳೂರು ಗ್ರಾಪಂ ಆವರಣ (ಗುಬ್ಬಿ ತಾ)
ಜ.4 ನೊಣವಿನಕೆರೆ ಪಂಚಾಯತಿ ರಂಗಮಂದಿರ ಆವರಣ ಮತ್ತು ಬಿಳಿಗೆರೆ ಪಂಚಾಯತಿ ಆವರಣ (ತಿಪಟೂರು ತಾ)
ಜ.9 ಊರ್ಡಿಗೆರೆ ಗ್ರಾಪಂ ಮತ್ತು ಗೂಳೂರು ಕಾಮನಕಟ್ಟೆ ಮೈದಾನ (ತುಮಕೂರು ಗ್ರಾಮಾಂತರ)
ಜ.10 ಗಂಜಲಗುಂಟೆ ಮತ್ತು ಕೊಡಿಗೇನಹಳ್ಳಿ ಗ್ರಾಪಂ ಆವರಣ (ಮಧುಗಿರಿ ತಾ)
ಜ.11 ಸಿಟಿಕೆರೆ ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ತೋವಿನಕೆರೆ ಗ್ರಾಪಂ ಆವರಣ (ಕೊರಟಗೆರೆ ತಾ)
ಜ.16 ಬಾಣಸಂದ್ರ ಮತ್ತು ದಂಡಿನಶಿವರ ಗ್ರಾಪಂ ಆವರಣ (ತುರುವೇಕೆರೆ ತಾ)
ಜ.17 ಹಂದನಕೆರೆ ಮತ್ತು ಶೆಟ್ಟಿಕೆರೆ ಗ್ರಾಪಂ ಆವರಣ (ಚಿ.ನಾ.ಹಳ್ಳಿ ತಾ)
ಜ.18 ಹೊನ್ನವಳ್ಳಿ ಮತ್ತು ರಂಗಾಪುರ ಪಂಚಾಯತಿ ಆವರಣ (ತಿಪಟೂರು ತಾ)
ಜ.20 ಬೆಲವತ್ತ ಗ್ರಾಪಂ ಆವರಣ (ಗುಬ್ಬಿ ತಾ)
ಜ.21 ಸ್ವಾಂದೇನಹಳ್ಳಿ ಮತ್ತು ಬೆಳ್ಳಾವಿ ಗ್ರಾಪಂ ಆವರಣ (ಗ್ರಾಮಾಂತರ)