ಒಂದೇ ಊರಿನ ಇಬ್ಬರು ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದಿರುವುದು ವಿಶೇಷ. ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ವಿ.ಸೋಮಣ್ಣ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಮರಳವಾಡಿಯವರು. ಇದೇ ಊರಿನ ಎಂ.ವಿ.ರಾಜಶೇಖರನ್ ಸಹ 2004 ರಿಂದ 2008ರವರೆಗೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಎಂ.ವಿ.ರಾಜಶೇಖರನ್ ಯೋಜನಾ ಮತ್ತು ಸಾಂಖ್ಯಿಕ ಖಾತೆ ರಾಜ್ಯ ಸಚಿವರಾಗಿದ್ದರು. 10 ವರ್ಷಗಳ ಬಳಿಕ ಮರಳವಾಡಿಯ ಸೋಮಣ್ಣ ಸಹ ಕೇಂದ್ರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವುದು ಗಮನಾರ್ಹವೆನಿಸಿದೆ.