ವೇತನ ಬಿಡುಗಡೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಜಿಲ್ಲಾ ಕಾರ್ಯದರ್ಶಿ ಈರಮ್ಮ, ಪದಾಕಾರಿಗಳಾದ ಪ್ರಭಾವತಿ, ರಾಧಾ, ಈರಮ್ಮ ಜಾಲಹಳ್ಳಿ, ಅಂಬಮ್ಮ, ಸಂತೋಷಮ್ಮ, ಲಕ್ಷ್ಮಿ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್ ಇದ್ದರು. 
ಜಿಲ್ಲೆ

ಆಶಾ ಕಾರ್ಯಕರ್ತೆಯರ ವೇತನ ಸಮಸ್ಯೆ ನಿವಾರಿಸಿ

ರಾಚಯ್ಯ ಸ್ವಾಮಿ

ರಾಯಚೂರು: ವೇತನ ಬಿಡುಗಡೆಯಲ್ಲಿ ಆಗುತ್ತಿರುವ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಆರ್‌ಸಿಎಚ್ ಅಕಾರಿ ಡಾ.ನಂದಿತಾಗೆ ಮನವಿ ಸಲ್ಲಿಸಿ, ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನವನ್ನು ಆರ್‌ಸಿಎಚ್ ಪೋರ್ಟಲೆಗೆ ಲಿಂಕ್ ಮಾಡಿರುವುದರಿಂದ ವೇತನ ಸಂಪೂರ್ಣವಾಗಿ ದೊರೆಯದಂತಾಗಿದೆ ಎಂದು ದೂರಿದರು.
ಮೊಬೈಲ್ ಆಧಾರಿತ ಕೆಲಸ ನೀಡುವುದನ್ನು ಕೈಬಿಡಬೇಕು. ಎನ್‌ಸಿಡಿ, ಎಸಿಎ್, ಟಿಬಿ ಸಂಬಂತ ಕೆಲಸಗಳಿಗೆ ವರ್ಷಗಟ್ಟಲೆ ಪ್ರೋತ್ಸಾಹ ಧನ ನೀಡಲಾಗುತ್ತಿಲ್ಲ. ಈ ಕುರಿತಂತೆ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ ಮಾತನಾಡಿ, ಆರ್‌ಸಿಎಚ್ ಪೋರ್ಟಲ್‌ನಲ್ಲಿರುವ ಅಗಣಿತ ಸಮಸ್ಯೆಗಳಿಂದ ಕಾರ್ಯಕರ್ತೆಯರು ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಎಸ್ಸಿ, ಎಸ್ಟಿ ಹೊರತುಪಡಿಸಿ ಬಿಪಿಎಲ್ ಅಡಿ ಬರುವ ಇತರೆ ವರ್ಗದ ಲಾನುಭವಿಗಳಿಗೆ ನೀಡುವ ಸೇವೆಗಳಿಗೆ ಪ್ರೋತ್ಸಾಹಧನ ಬರುತ್ತಿಲ್ಲ.
ಗರ್ಭಿಣಿಯರ ಆರೈಕೆ, ಹೆರಿಗೆ, ಮನೆ ಭೇಟಿಗೆ ಯಾವುದೇ ಪ್ರೋತ್ಸಾಹಧನವಿಲ್ಲದೆ ಉಚಿತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಎನ್‌ಸಿಡಿ ಸರ್ವೇಗೆ ಜಿಲ್ಲೆಯ ಕಾರ್ಯಕರ್ತೆಯರಿಗೆ 40 ರಿಂದ 50 ಲಕ್ಷ ರೂ. ಪ್ರೋತ್ಸಾಹ ಧನ ಪಾವತಿಯಾಗಬೇಕಾಗಿದೆ. ಮೊಬೈಲ್ ನೀಡದಿದ್ದರೂ ಮೊಬೈಲ್ ಆಧರಿತ ಚಟುವಟಿಕೆಗಲನ್ನು ನೀಡಲಾಗುತ್ತಿದೆ ಎಂದರು.
ಆರ್‌ಸಿಎಚ್ ಅಕಾರಿ ಡಾ.ನಂದಿನಿ ಮನವಿ ಸ್ವೀಕರಿಸಿ, ದಸರಾ ರಜೆ ನಂತರ ಜಿಲ್ಲಾ ಕುಂದು ಕೊರತೆ ಸಭೆ ನಡೆಸಲಾಗುವುದು ಏಪ್ರಿಲ್‌ನಿಂದ ಇಲ್ಲಿಯವರೆಗೆ ಪಾವತಿಯಾಗದ ಎಎನ್‌ಸಿ, ಹೆರಿಗೆ, ಎಚ್‌ಬಿಎನ್‌ಸಿ, ಎಂಆರ್ ಚಟುವಟಿಕೆಗಳಿಗೆ ಪ್ರೋತ್ಸಾಹಧನ ಪಾವತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಈರಮ್ಮ, ಪದಾಕಾರಿಗಳಾದ ಪ್ರಭಾವತಿ, ರಾಧಾ, ಈರಮ್ಮ ಜಾಲಹಳ್ಳಿ, ಅಂಬಮ್ಮ, ಸಂತೋಷಮ್ಮ, ಲಕ್ಷ್ಮಿ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ಅಣ್ಣಪ್ಪ ಪಾಲ್ಗೊಂಡಿದ್ದರು.