ವಸತಿ ನಿಲಯ ವಸತಿ ನಿಲಯ ವಾರ್ಡನ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ವಸತಿ ನಿಲಯ ವಾರ್ಡನ್‌ಗಳು ಮಂಗಳವಾರ ಭೇಟಿಯಾಗಿ ಚರ್ಚಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ, ವಾರ್ಡನ್‌ಗಳಾದ ಗಿರಿಜಾ ಪಾಟೀಲ್, ರೂಪಾ, ಬಸವರಾಜ ಬಿರಾದರ, ವಿಜಯಲಕ್ಷ್ಮಿ, ನಾಗರಾಜ, ಬೂದೆಪ್ಪ, ಭೀಮಣ್ಣ, ಮಂಜುಳಾ ಅವಧೂತ, ವಿಜಯ, ಶಶಿಕಲಾ ಇದ್ದರು. 
ಜಿಲ್ಲೆ

ವಸತಿ ನಿಲಯ ವಾರ್ಡನ್ ಸಮಸ್ಯೆ ನಿವಾರಿಸಿ

ರಾಚಯ್ಯ ಸ್ವಾಮಿ

ರಾಯಚೂರು: ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳ ವಾರ್ಡನ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಸರ್ಕಾರ ನೌಕರರ ಸಂಘದ ನೇತೃತ್ವದಲ್ಲಿ ವಾರ್ಡನ್‌ಗಳ ನಿಯೋಗ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ವಸತಿನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಆಹಾರಧಾನ್ಯಗಳನ್ನು ಸರಬರಾಜು ಮಾಡಬೇಕು. ಕುಡಿಯುವ ನೀರು ಮತ್ತು ಶೌಚಾಲಯ ಸ್ವಚ್ಛತೆ ಬಗ್ಗೆ ಮತ್ತು ಇತರೆ ಬಿಲ್ ಬಿಡುಗಡೆಗೆ ಅಕಾರಿಗಳು ಸಹಕರಿಸಿ ವಾಡ್ನ್ಗಳಿಗೆ ನೈತಿಕ ಬೆಂಬಲ ನೀಡಬೇಕು.
ಸಾರ್ವಜನಿಕರ ದೂರುಗಳಿಗೆ ಸಂಬಂಸಿದಂತೆ ಅಮಾನತು ಮತ್ತು ಕ್ರಮಕೈಗೊಳ್ಳುವ ಬದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ವಾರ್ಡನ್‌ಗಳ ಸಮಸ್ಯೆ ಆಲಿಸಿ ಚಂದ್ರಶೇಖರ ನಾಯಕ ಅಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ, ವಾರ್ಡನ್‌ಗಳಾದ ಗಿರಿಜಾ ಪಾಟೀಲ್, ರೂಪಾ, ಬಸವರಾಜ ಬಿರಾದರ, ವಿಜಯಲಕ್ಷ್ಮಿ, ನಾಗರಾಜ, ಬೂದೆಪ್ಪ, ಭೀಮಣ್ಣ, ಮಂಜುಳಾ ಅವಧೂತ, ವಿಜಯ, ಶಶಿಕಲಾ, ಭೀಮಾದೇವಿ, ಶಾಂತಾ, ಸಿದ್ಧಲಿಂಗ, ರಾಜೇಶ್ವರಿ, ವೇಣು ಉಪಸ್ಥಿತರಿದ್ದರು.