ಮಾನ್ವಿಯ ಜುಮ್ಮಲದೊಡ್ಡಿ ಕೆರೆಯನ್ನು ಸಚಿವ ಎನ್.ಎಸ್.ಬೋಸರಾಜು ಭಾನುವಾರ ವೀಕ್ಷಣೆ ಮಾಡಿದರು. ಶಾಸಕ ಹಂಪಯ್ಯ ನಾಯಕ, ಖಾಲೀದ್ ಖಾದ್ರಿ, ಡಿ.ವೀರೇಶ ಇತರರಿದ್ದರು. 
ಜಿಲ್ಲೆ

ಕುಡಿವ ನೀರಿನ ಸಮಸ್ಯೆ ನಿವಾರಿಸಿ

ನರೇಶ್ ಕುಮಾರ್

ಮಾನ್ವಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೇಸಿಗೆ ವೇಳೆ ಕುಡಿವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವರಮನಿಗೆ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬೆಳಗಿನಪೇಟೆ, ಆದಾಪುರ ಪೇಟೆ, ಜುಂಬಲದೊಡ್ಡಿ, ದೊಡ್ಡಕಟಕರ ಓಣಿ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಶೀಘ್ರ ಇತ್ಯರ್ಥಗೊಳಿಸಬೇಕು.

ಜುಮ್ಮಲದೊಡ್ಡಿಯ ಸಿಲ್ವರ್‌ಜೂಬ್ಲಿ ನೀರಿನ ಟ್ಯಾಂಕ್‌ನಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ 350 ಮೀ. ಕುಡಿವ ನೀರಿನ ಪೈಪ್‌ಲೈನ್‌ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅವಶ್ಯವಿದ್ದಲ್ಲಿ ಕೊಳವೆಬಾವಿಗಳನ್ನು ಕೊರೆಸಬೇಕು ಎಂದು ತಿಳಿಸಿದರು. ಶಾಸಕ ಹಂಪಯ್ಯ ನಾಯಕ, ಮುಖಂಡರಾದ ಬಿ.ಕೆ.ಅಮರೇಶಪ್ಪ, ರೌಡೂರ ಮಹಾಂತೇಶ ಸ್ವಾಮಿ, ಡಿ.ವೀರೇಶ, ಪುರಸಭೆ ಸದಸ್ಯ ಜಿಲಾನಿ ಖುರೇಷಿ, ಎಇ ಚೇತನಾ ಇತರರಿದ್ದರು.