ಜಿಲ್ಲೆ

ಸಾರಿಗೆ ನೌಕರರ ಬೇಡಿಕೆ ಇತ್ಯರ್ಥಪಡಿಸಿ, ಇಲ್ಲದಿದ್ದರೆ ಜೂನ್ 15ರಿಂದ ಚಳವಳಿ ಎಚ್ಚರಿಕೆ

Dharwada - Basavaraj Idli

ಹುಬ್ಬಳ್ಳಿ: ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಶ್ರೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂನ್ 15ರ ನಂತರ ಚಳವಳಿಗೆ ಧುಮುಕುವುದು ಅನಿವಾರ್ಯವಾಗಲಿದೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ. ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಏರ್ಪಡಿಸಿದ್ದ ಫೆಡರೇಶನ್ನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಶಕ್ತಿ ಯೋಜನೆ ಜಾರಿ ಆದಾಗಿನಿಂದ ಎಲ್ಲ ವರ್ಗಗಳ ನೌಕರರು ಹೆಚ್ಚಿನ ಒತ್ತಡದಲ್ಲಿದ್ದಾರೆ. ವಾಹನಗಳ ಸಂಖ್ಯೆ ಅವಶ್ಯಕತೆಗೆ ಅನುಗುಣವಾಗಿ ಇಲ್ಲ. ಸಿಬ್ಬಂದಿ ಕೊರತೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲದರ ಮಧ್ಯೆ ಯೋಜನೆ ಜಾರಿಗೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದರು.

ತಾಂತ್ರಿಕ ಸಿಬ್ಬಂದಿಗೂ ಪ್ರೋತ್ಸಾಹ ಧನ ನೀಡಬೇಕು. ಚಾಲಕ, ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು. ನಿಗಮ, ವಿಭಾಗಗಳ ಮಟ್ಟದಲ್ಲಿ ಅಥವಾ ಟಕಗಳ ಮಟ್ಟದಲ್ಲಿ ಆಡಳಿತ ವರ್ಗ ಕಾಮಿರ್ಕ ಸಂಟನೆಗಳೊಂದಿಗೆ ಕಾಲಕಾಲಕ್ಕೆ ದ್ವಿಪಯ ಸಭೆ ನಡೆಸಬೇಕು. ಕಾಮಿರ್ಕ ಸ್ನೇಹಿ ವಾತಾವರಣ ನಿಮಿರ್ಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾದ ಫಾಮ್ರ್-4ನ್ನು ಹಿಂಪಡೆದು ವೈಜ್ಞಾನಿಕ ಸಮೀಕ್ಷೆ, ಯೋಜನೆ ಮೂಲಕ ಚಾಲಕ, ನಿರ್ವಾಹಕರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರ ಹಾಗೂ ನಿಗಮಗಳ ಆಡಳಿತ ವರ್ಗ ಫೆಡರೇಶನ್ನ ಬೇಡಿಕೆಗಳನ್ನು ಇತ್ಯರ್ಥ ಮಾಡಬೇಕು.

ಕಾಮಿರ್ಕರು ಚಳವಳಿಗೆ ಇಳಿಯುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
ಫೆಡರೇಶನ್ ಕಾರ್ಯಾಧ್ಯಕ್ಷ ಆರ್.ಎಫ್. ಕವಳಿಕಾಯಿ, ಉಪಾಧ್ಯಕ್ಷ ಬಿ.ವಿ. ಕುಲಕಣಿರ್, ಗೋಪಾಲರಾಯ, ಸಿ.ವಿ. ಸಿಕ್ಕೇರಿ ಇತರರು ಗೋಷ್ಠಿಯಲ್ಲಿದ್ದರು.