ಜಿಲ್ಲೆ

ಭಗವದ್ಗೀತೆಯಿಂದ ಸಮಸ್ಯೆಗಳಿಗೆ ಪರಿಹಾರ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ಸನಾತನ ವೈದಿಕ ಸಾಹಿತ್ಯ ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯ ಎಂದು ಸಂಹಿತಾ ಟ್ರಸ್ಟ್​ನ ಸಂಸ್ಥಾಪಕ ಡಾ. ವಿಘ್ನೕಶ್ವರ ಭಟ್ಟ ಹೇಳಿದರು.

ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಪಾಠಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ವೇದ, ಶಾಸ್ತ್ರ, ಪುರಾಣಗಳು, ಆಯರ್ವೆದ ಇವೆಲ್ಲ ಜಗತ್ತಿನ ಅತ್ಯಂತ ಶ್ರೇಷ್ಠ ವಿದ್ಯೆಗಳು. ಇಂತಹ ವಿದ್ಯೆಗಳನ್ನು ನಾವೆಲ್ಲರೂ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಭಗವದ್ಗೀತೆಯಂತಹ ಗ್ರಂಥಗಳು ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿವೆ ಎಂದರು. ಶ್ರೀಮಾತಾ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತರಾದ ಶ್ರೀಪಾದ ಹೆಗಡೆ ಭಟ್ರಕೇರಿ ವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ವಿ. ನಾಗೇಶ ಭಟ್ಟ ಹಾಗೂ ಅಧ್ಯಾಪಕರು ಶ್ರೀಪಾದ ಹೆಗಡೆಯವರೊಂದಿಗೆ ಬಾಂಧವ್ಯ ಮತ್ತು ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು.

ಹಿರಿಯ ವೈದಿಕ ವಿ. ನಾರಾಯಣ ಭಟ್ಟ ಉಮ್ಮಚಗಿ ಮಾತನಾಡಿ, ವಿದ್ಯೆ ಗಳಿಸಬೇಕು, ಉಳಿಸಬೇಕು ಮತ್ತು ಬೆಳೆಸಬೇಕು ಎಂದರು.

ಗಣಪತಿ ನಾರಾಯಣ ಭಟ್ಟ ಉಮ್ಮಚಗಿ, ಸಂಸ್ಥೆಯ ಉಪಾಧ್ಯಕ್ಷ ವಿ.ಶಿವಕುಮಾರ ಭಟ್ ಯಡಳ್ಳಿ, ಅಧ್ಯಾಪಕ ವಿ.ಮಹೇಶ ಭಟ್ಟ ಇಡಗುಂದಿ ಇತರರಿದ್ದರು.