ರಾಮದುರ್ಗ: ಸೌಹಾರ್ದ ಸಂಗಳು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು. ಸಹಕಾರಿ ಸಂಸ್ಥೆಗಳು ಅಭಿವದ್ಧಿ ಹೊಂದಬೇಕಾದಲ್ಲಿ ಆಡಳಿತ ಮಂಡಳಿ ಒಗ್ಗಟ್ಟು ಮತ್ತು ಸೇವಾ ಮನೋಭಾವ ಅಗತ್ಯ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಜುನಿಪೇಟೆಯ ಹಳೇ ಮೆಸೂರು ಬ್ಯಾಂಕ್ ಎದುರಿನ ಕಟ್ಟಡದಲ್ಲಿ ಬುಧವಾರ ರಾಮದುರ್ಗದ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂದ ಶಾಖೆ ಉದ್ಘಾಟಿಸಿ ಮಾತನಾಡಿದರು. ದೈನಂದಿನ ವ್ಯವಹಾರಗಳಲ್ಲಿ ಗ್ರಾಹಕರೊಂದಿಗೆ ಬ್ಯಾಂಕ್ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಗ್ರಾಹಕರ ಅಭಿವೃದ್ಧಿಯಾದರೆ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲು ಸಾಧ್ಯವಿದೆ ಎಂದರು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಸಹಕಾರಿ ಸಂಗಳಿಂದ ಬಡವರ, ಉದ್ಯೋಗ ಆಕಾಂಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಎಂದರು.
ಅಭಿವದ್ಧಿ ಅಧಿಕಾರಿ ಗಿರೀಶ ಯಾವಗಲ ಮಾತನಾಡಿ, ಸಹಕಾರಿ ಆಡಳಿತ ಮಂಡಳಿ ಉತ್ತಮ ಸೇವೆ ನೀಡಲಿ ಎಂದರು. ಮುಳ್ಳೂರ&ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಕಾರಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೆಸಿದರು.
ಸಹಕಾರಿ ಸಂದ ಅಧ್ಯ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯತೆ ವಹಿಸಿ ಮಾತನಾಡಿದರು. ಬ್ಯಾಂಕ್ ಉಪಾಧ್ಯ ಗೌಡಪ್ಪಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ, ಬ್ಯಾಂಕ್ ಆ್ ಬರೋಡಾ ಶಾಖೆ ವ್ಯವಸ್ಥಾಪಕ ಹಣಮಂತರಾಯ ಬಿರಾದಾರ, ಸಹಕಾರಿ ಸಂದ ಕಾನೂನು ಸಲಹೆಗಾರ ಸಿದ್ದಪ್ಪ ಜಾಮದಾರ, ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಸಲಹಾ ಸಮಿತಿ ವೀರೇಂದ್ರ ಶೆಟ್ಟಿ, ಚನ್ನಬಸು ಹಿರೆರಡ್ಡಿ, ಸಂದ ನಿರ್ದೇಶಕರಾದ ಡಾ.ರೇವಣಸಿದ್ದಪ್ಪ ಕುಳ್ಳೂರ, ಪ್ರಕಾಶ ಚವಲಿ, ರಾಮಚಂದ್ರ ಯಾದವಾಡ, ಶಿವರಡ್ಡಿ ಜಗಾಪುರ, ಗೀತಾ ಯಾದವಾಡ, ರಮೇಶ ಮನಿಹಾಳ, ಶಿವಾನಂದ ದಡೇದ, ರಾಜಶೇಖರ ಶಿರೋಳ, ಕುಬೇರ ಗರಡಿಮನಿ, ಬಿ.ಎಸ್. ಪಾಟೀಲ, ಮೆಲಾರ ಬಸಿಡೋಣಿ, ಮಹೇಶ ಸಾಲಿಮಠ, ಹಣಮಂತ ಹಂಚಿನಾಳ, ಶ್ರೀಶೆಲ ಶಿರಗುಂಪಿ, ಶಾಖಾ ವ್ಯವಸ್ಥಾಪಕ ಅಶೋಕ ವಾಳಿ ಇತರರಿದ್ದರು.