ಹೂವಿನಹಡಗಲಿಯ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಘಟಕಕ್ಕೆ ಮಂಗಳವಾರ ಡಿಸಿ ಎಂ.ಎಸ್.ದಿವಾಕರ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್, ತಹಸೀಲ್ದಾರ್ ಅಮರೇಶ, ಆರೋಗ್ಯ ನಿರೀಕ್ಷಕರಾದ ಸೋಮಶೇಖರ, ಮಾರುತಿ ಇತರರಿದ್ದರು. 
ಜಿಲ್ಲೆ

ಘನತ್ಯಾಜ್ಯ ಘಟಕ ಜಿಲ್ಲೆಗೆ ಮಾದರಿ

ನರೇಶ್ ಕುಮಾರ್

ಹೂವಿನಹಡಗಲಿ: ಪುರಸಭೆ ನಿರ್ವಹಿಸುತ್ತಿರುವ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಜಿಲ್ಲೆಗೆ ಮಾದರಿಯಾಗಿದೆ ಎಂದು ಡಿಸಿ ಎಂ.ಎಸ್.ದಿವಾಕರ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಪಟ್ಟಣದಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ ಸಂಸ್ಕರಣೆ ಮಾಡಿ ವೈಜ್ಞಾನಿಕ ರೀತಿಯಲ್ಲಿ ಎಲ್ಲ ತ್ಯಾಜ್ಯವನ್ನು ಪರಿಪೂರ್ಣ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಪಟ್ಟಣದಲ್ಲಿ ಸಕಾಲಕ್ಕೆ ತ್ಯಾಜ್ಯ ತೆರವುಗೊಳಿಸಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುತ್ತಿರುವುದು ಜಿಲ್ಲೆಗೆ ಮಾದರಿಯಾಗಿದೆ. ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾವಯವ ಹಾಗೂ ಎರೆಹುಳು ಗೊಬ್ಬರ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಪುರಸಭೆಗೂ ಆದಾಯ ಬರುತ್ತಿದೆ. ಇದೇ ರೀತಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಮೂಲಕ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್, ತಹಸೀಲ್ದಾರ್ ಅಮರೇಶ, ಆರೋಗ್ಯ ನಿರೀಕ್ಷಕರಾದ ಸೋಮಶೇಖರ, ಮಾರುತಿ ಇತರರಿದ್ದರು.