ಸಿರವಾರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಜಿ.ಹಂಪಯ್ಯ ನಾಯಕ ವಾಲಿಬಾಲ್ ಎಸೆಯುವ ಮೂಲಕ ಚಾಲನೆ ನೀಡಿದರು.ಗ್ಯಾರಂಟಿ ಸಮಿತಿಯ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಮುಖಂಡರಾದ ರಮೇಶ ದರ್ಶನಕರ್, ಶಿವಶರಣ ಸಾಹುಕಾರ್ ಅರಕೇರಿ, ನಾಗರಾಜ ಚಿನ್ನಾನ್, ಗಡ್ಲ್ ಬಸವರಾಜ, ತಹಸೀಲ್ದಾರ ರವಿ ಎಸ್. ಅಂಗಡಿ ಇದ್ದರು.  
ಜಿಲ್ಲೆ

ಸೋಲೇ ಗೆಲುವಿನ ಮೆಟ್ಟಿಲು

Kopala - Desk - Eraveni

ಸಿರವಾರ: ಯುವಕರು ಕ್ರೀಡೆ ಆಸಕ್ತಿ ಬೆಳೆಸಿಕೊಳ್ಳಬೇಕು, ಇದರಿಂದ ಮಾನಸಿಕ ಒತ್ತಡ ನಿವಾರಣೆ ಹಾಗೂ ಆರೋಗ್ಯದಿಂದ ಇರಲು ಸಾಧ್ಯ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಮೊಬೈಲ್ ಗಿಳು ಬಿಟ್ಟು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿಬೇಕು. ಕ್ರೀಡೆಯಲ್ಲಿ ಸೋಲು - ಗೆಲುವು ಒಂದು ನಾಣ್ಯದ ಎರಡು ಮುಖಗಳಿದಂತೆ. ಸೋಲೇ ಗೆಲುವಿನ ಮೆಟ್ಟಿಲು ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಬ್ರಿಜೇಶ್ ಪಾಟೀಲ್, ತಹಸೀಲ್ದಾರ ರವಿ ಎಸ್.ಅಂಗಡಿ, ಪ್ರಾಚಾರ್ಯ ವೆಂಕಟೇಶ, ಉಪನ್ಯಾಸಕ ಹನುಮಂತ ಚನ್ನೂರು, ಪ್ರಮುಖರಾದ ರಮೇಶ ದರ್ಶನಕರ್, ಶಿವಶರಣ ಸಾಹುಕಾರ್ ಅರಕೇರಿ, ನಾಗರಾಜ ಚಿನ್ನಾನ್, ಗಡ್ಲ್ ಬಸವರಾಜ, ಅಮರೇಶಗೌಡ ನಂದರೆಡ್ಡಿ ಇತರರು ಇದ್ದರು.