ತೆಲಸಂಗ ಗ್ರಾಮದಲ್ಲಿ ಸೈನಿಕ ಭವನ ಉದ್ಘಾಟಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡದರು. ಹಿರೇಮಠದ ವೀರೇಶ್ವರ ದೇವರು, ಕರ್ನಲ್ ಬಿ.ಎಸ್.ಹಿಪ್ಪರಗಿ, ಬಸವಗುಂಡಯ್ಯ ಸ್ವಾಮೀಜಿ, ಮೀನಾಕ್ಷಿ ಬಾಣಿ, ಇತರರಿದ್ದರು. 
ಜಿಲ್ಲೆ

ಸೈನಿಕರ ತ್ಯಾಗ ಸದಾ ಸ್ಮರಣೀಯ

ಪ್ರಶಾಂತ ಹೂಗಾರ

ತೆಲಸಂಗ: ದೇಶಕ್ಕಾಗಿ ಜೀವದ ಹಂಗಿಲ್ಲದೆ ಹೋರಾಡುವ ಸೈನಿಕರು ಎಲ್ಲರಿಗೂ ಮಾದರಿ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು. ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಿಸಿದ ನೂತನ ಸೈನಿಕರ ಭವನ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸೈನಿಕರ ತ್ಯಾಗ ಎಂದೆಂದಿಗೂ ಸ್ಮರಣೀಯ ಎಂದರು.

ನಿವೃತ್ತ ಸೇನಾಧಿಕಾರಿ ಕರ್ನಲ್ ಬಿ.ಎಸ್.ಹಿಪ್ಪರಗಿ ಮಾತನಾಡಿ, ಸೈನಿಕನಾಗುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಮಗೆ ಸಿಕ್ಕಿದ್ದು ಸೌಭಾಗ್ಯ ಎಂದರು.

ಕುಂಬಾರ ಗುರುಪೀಠದ ಬಸವಗುಂಡಯ್ಯ ಸ್ವಾಮೀಜಿ, ಸಾಬು ಅರಟಾಳ, ಮೀನಾಕ್ಷಿ ಬಾಣಿ, ಕಾಶೀನಾಥ ಕುಂಬಾರಕರ, ಅರವಿಂದ ಉಂಡೋಡಿ, ಶಿವಪ್ಪ ಚೌಗಲೆ, ಬಿಸಲಪ್ಪ ತಾಂವಶಿ, ಶ್ರೀಮಂತ ಸೊಂದಕರ, ಅಣ್ಣಾಸಾಬ ಸಾವಳಗಿ, ಶಿವಮಲ್ಲಪ್ಪ ಕೊಳಲಿ, ಗಂಗಪ್ಪ ಗಂಗಾಧರ, ಮಾರುತಿ ಚವ್ಹಾಣ, ಸುಭಾಸ ಮೋರೆ ಇತರರು ಇದ್ದರು. ಗ್ಯಾನು ನಲವಡೆ ಸ್ವಾಗತಿಸಿದರು. ಗಪೂರ್ ಮುಲ್ಲಾ ನಿರೂಪಿಸಿದರು. ಧರೆಪ್ಪ ಮಾಳಿ ವಂದಿಸಿದರು.