ಜಿಲ್ಲೆ

ರಾಜವೀರ ಮದಕರಿ ನಾಯಕ ಅವರ ಶೌರ್ಯ ಮತ್ತು ಪರಾಕ್ರಮ ಮರೆಯಲು ಸಾಧ್ಯವಿಲ್ಲ

ಮೊಳಕಾಲ್ಮೂರು: ಚಿತ್ರದುರ್ಗ ಸಂಸ್ಥಾನದ ಏಳು ಸುತ್ತಿನ ಕೋಟೆಯ ಅಧಿಪತಿಯಾಗಿ ಆಳಿದ ರಾಜವೀರ ಮದಕರಿ ನಾಯಕ ಅವರ ಶೌರ್ಯ ಮತ್ತು ಪರಾಕ್ರಮವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.

ಜನ್ಮದಿನಾಚರಣೆ ಸಂಭ್ರಮ

ಪಟ್ಟಣದ ಪಿಟಿಹಟ್ಟಿ ವೃತ್ತದಲ್ಲಿ ಚಿತ್ರದುರ್ಗ ಸಂಸ್ಥಾನದ ಪಾಳೆಯಗಾರರ ವಂಶಸ್ಥರಾದ ರಾಜವೀರ ಮದಕರಿ ನಾಯಕ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸಿಂಹಸ್ವಪ್ನವಾಗಿದ್ದ ವೀರ

"ಕೋಟೆ ಪ್ರಾಂತ್ಯ ಮತ್ತು ನಾಡಿನ ರಕ್ಷಣೆಗೆ ಮದಕರಿ ನಾಯಕರು ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರು ತಮ್ಮ ಕೆಚ್ಚೆದೆಯ ಧೈರ್ಯ ಮತ್ತು ಆನೆಯನ್ನೇ ಪಳಗಿಸಿದ ವೀರ ಪರಾಕ್ರಮಿ ಎಂದು ಬಿರುದು ಪಡೆದುಕೊಂಡಿದ್ದರು. ಮದಕರಿ ನಾಯಕರು ಸೈನಿಕರು ಹಾಗೂ ಜನ ಸಾಮಾನ್ಯರ ಹಿತಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ವೀರರಾಗಿದ್ದಾರೆ" ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾನಗಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸೂರಯ್ಯ, ಡಾ. ಪಿ.ಎಂ. ಮಂಜುನಾಥ, ಸಿದ್ದಣ್ಣ, ಪ್ರಭಾಕರ, ಕೆ.ಬಿ. ಮಹೇಶ್, ಮಂಜಣ್ಣ, ಹೇಮಂತಕುಮಾರ, ಸಿದ್ದಾರ್ಥ, ವೆಂಕಟೇಶ, ಗೋವಿಂದಪ್ಪ, ದರ್ಶನ್, ಮಣಿಕಂಠ, ಬಸವನಾಯಕ, ತಿಪ್ಪೇಸ್ವಾಮಿ, ಷಣ್ಮುಖ, ನಾಗರಾಜ ಸೇರಿದಂತೆ ನಾಯಕ ಸಮಾಜದ ಯುವ ಮುಖಂಡರು ಉಪಸ್ಥಿತರಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.