ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚಿಂತಕ ಗಂಗಾಧರ ಹಿರೇಮಠ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ ಇತರರಿದ್ದರು. 
ಜಿಲ್ಲೆ

ಸೈನಿಕರೇ ನಮ್ಮ ನಿಜ ಹಿರೋಗಳು

ಕಲಾದಗಿ: ಭಾರತೀಯ ಸೈನ್ಯದ ಶೌರ್ಯ, ಧೈರ್ಯ, ಬಲಿದಾನ ಅನನ್ಯವಾಗಿದೆ ಎಂದು ರಾಷ್ಟ್ರೀಯ ಚಿಂತಕ ಗಂಗಾಧರ ಹಿರೇಮಠ ಹೇಳಿದರು.
ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಾರತದ ಇತಿಹಾಸದಲ್ಲೇ ಈ ದಿನಕ್ಕೆ ಮಹತ್ವವಿದೆ. ಈ ಯುದ್ಧದಲ್ಲಿ ಕೊನೇಯುಸಿರು ಇರುವವರೆಗೂ ಗೆಲುವಿಗಾಗಿ ಹೋರಾಡಿದ ಸೈನಿಕರ ಆ ಹೋರಾಟ ಅಪ್ಪಟ ದೇಶಭಕ್ತಿಯ ಪ್ರತೀಕ. ಅಂಥವರೇ ನಮಗೆ ನಿಜವಾದ ಹಿರೋಗಳು, ಆದರ್ಶವಾಗುವವರು ಎಂದರು.

ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಸಂಸ್ಥೆ ಶಿಕ್ಷಕ ಆರ್.ವಿ. ಜಾಧವ ಸ್ವಾಗತಿಸಿದರು. ಬಾಬೂ ಪೂಜಾರಿ ವಂದಿಸಿದರು. ಪಿ.ಎಚ್. ಮಾರಂಗಪ್ಪನವರ ನಿರೂಪಿಸಿದರು.